ಮುಂಬೈ: ಕೇಂದ್ರ ಸರ್ಕಾರ ಮತ್ತೆ ಜಿಎಸ್ ಟಿ ತೆರಿಗೆಯನ್ನು ಪರಿಷ್ಕರಣೆ ಮಾಡಲಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಶಿವಪ್ರತಾಪ್ ಶುಕ್ಲಾ ಅವರು ಸೋಮವಾರ ಹೇಳಿದ್ದಾರೆ.
ಜೆಎಸ್ ಟಿ ತೆರಿಗೆ ಸ್ಥಿರವಾದ ನಿಯವಲ್ಲ. ಕೇಂದ್ರ ಸರ್ಕಾರ ಆಗಾಗ ಪರಿಷ್ಕರಣೆ ಮಾಡುತ್ತದೆ. ಜನರ ಸೌಕರ್ಯಕ್ಕೆ ನಾವು ಹೆಚ್ಚಿನ ಆದ್ಯತೆ ನೀಡುತ್ತವೆ ಮತ್ತು ಅವರ ಅನುಕೂಲಕ್ಕೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ.
ಕಳದೆ ಶುಕ್ರವಾರ ಜಿಎಸ್ ಟಿ ಕೌನ್ಸಿಲ್ ಕೆಲವು ತೆರಿಗಳನ್ನು ಪರಿಷ್ಕರಿಸಿದ್ದು, ಒಟ್ಟು 27 ವಸ್ತುಗಳ ತೆರಿಗೆಯಲ್ಲಿ ಶೇಕಡವಾರು ಕಡಿಮೆಗೊಳಿಸಲಾಗಿದೆ. ಅಲ್ಲದೆ 50 ಸಾವಿರಕ್ಕೂ ಅಧಿಕ ಚಿನ್ನಾಭರಣ ಖರೀದಿಗೆ ಪ್ಯಾನ್ ಮತ್ತು ಕೆವೈಸಿ (ನಿಮ್ಮ ಗ್ರಾಹಕರ ತಿಳಿಯಿರಿ) ಕಡ್ಡಾಯ ಕ್ರಮಕ್ಕೆ ತಾತ್ಕಾಲಿಕ ತಡೆ ನೀಡಿದೆ.