ವಾಣಿಜ್ಯ

ಅಕ್ಟೋಬರ್ 12ರಿಂದಲೇ ಬಿಐಎಸ್ ಕಾಯ್ದೆ ಜಾರಿಯಾಗಿದೆ: ಕೇಂದ್ರ ಸರ್ಕಾರ

Lingaraj Badiger
ನವದೆಹಲಿ: ಚಿನ್ನಾಭರಣಗಳು ಸೇರಿದಂತೆ ಇನ್ನಷ್ಟು ಉತ್ಪನ್ನಗಳ ಸೇರ್ಪಡೆಗೆ ಅವಕಾಶದೊಂದಿಗೆ ಬಹು ನಿರೀಕ್ಷಿತ ಬ್ಯೂರೋ ಆಫ್ ಇಂಡಿಯನ್‌ ಸ್ಟಾಂಡರ್ಡ್ಸ್‌ (ಬಿಐಎಸ್‌) ಕಾಯ್ದೆ ಅಕ್ಟೋಬರ್ 12ರಿಂದಲೇ ಜಾರಿಗೆ ಬಂದಿದೆ ಎಂದು ಕೇಂದ್ರ ಸರ್ಕಾರ ಶನಿವಾರ ತಿಳಿಸಿದೆ.
ಕೇಂದ್ರ ಸರ್ಕಾರ ಕಳೆದ ಮಾರ್ಚ್ 2016ರಲ್ಲಿ 1986ರ ಬಿಐಎಸ್ ಕಾಯ್ದೆಯನ್ನು ಸರಳಗೊಳಿಸಿ ಮತ್ತು ನಿಯಮ ಉಲ್ಲಂಘನೆಗೆ ಹೆಚ್ಚಿನ ದಂಡ ವಿಧಿಸುವುದಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೆಲವೊಂದು ತಿದ್ದುಪಡಿಗಳನ್ನು ಮಾಡಿ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಿತ್ತು. 
ಈ ಹೊಸ ಕಾಯ್ದೆ ಜಾರಿಯಿಂದ ವ್ಯವಹಾರ ಮತ್ತಷ್ಟು ಸುಲಭವಾಗಲಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ಇಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಐಎಸ್ ಕಾಯ್ದೆ ಜಾರಿಯಿಂದಾಗಿ ಇನ್ನು ಮುಂದೆ ಚಿನ್ನಾಭರಣಗಳ ಮಾರಾಟಕ್ಕೂ ಮುನ್ನ ಬ್ಯೂರೋ ಆಫ್ ಇಂಡಿಯನ್‌ ಸ್ಟಾಂಡರ್ಡ್ಸ್‌ನ (ಗುಣಮಟ್ಟ ಸಂಸ್ಥೆ) ಅನುಮತಿ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಅಲ್ಲದೇ ಆಭರಣಗಳಿಗೆ ಬಿಐಎಸ್‌ ಮುದ್ರೆಯನ್ನು ಬಳಸುವುದನ್ನೂ ಕಡ್ಡಾಯಗೊಳಿಸಲಾಗಿದೆ.
SCROLL FOR NEXT