ನವದೆಹಲಿ: ನೋಟು ನಿಷೇಧ ಬಳಿಕ ಹಣದ ವಹಿವಾಟು ಮತ್ತು ಹಣದ ವಿತ್ ಡ್ರಾ ಮೇಲೆ ಹೇರಲಾಗಿದ್ದ ನಿಯಂತ್ರಣವನ್ನು ಭಾರತದ ಆತೀ ದೊಡ್ಡ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್ ನಿಧಾನವಾಗಿ ಸಡಿಲಗೊಳಿಸುತ್ತಿದೆ.
ಈ ಹಿಂದೆ ಎಟಿಎಂ ಗಳಲ್ಲಿನ ವಿತ್ ಡ್ರಾ ಮಿತಿ ನಿಗದಿಗೊಳಿಸಿದ್ದ ಎಸ್ ಬಿಐ ಇದೀಗ ಆ ಮಿತಿಯನ್ನು ಕೆಲ ನಿರ್ಧಿಷ್ಟ ಗ್ರಾಹಕರಿಗೆ ಸಡಿಲಗೊಳಿಸಿದ್ದು, ದಿನವೊಂದಕ್ಕೆ ಎಟಿಎಂ ಕೇಂದ್ರಗಳಿಂದ ವಿತ್ ಡ್ರಾ ಮಾಡಬಹುದಾದ ಗರಿಷ್ಠ ಹಣದ ಪ್ರಮಾಣವನ್ನು 2 ಲಕ್ಷಕ್ಕೇರಿಸಿದೆ. ಆದರೆ ಇದು ಎಲ್ಲ ಗ್ರಾಹಕರಿಗೂ ಅನ್ವಯವಾಗುವುದಿಲ್ಲ ಬದಲಿಗೆ ಕೆಲ ನಿರ್ಧಿಷ್ಟ ಗ್ರಾಹಕರಿಗೆ ಮಾತ್ರ ಅನ್ವಯವಾಗಲಿದ್ದು, ಎಟಿಎಂ ಕಮ್ ಡೆಬಿಟ್ ಕಾರ್ಡ್ ಹೊಂದಿರುವ ಎಸ್ ಬಿಐ ಖಾತೆದಾರರು ಮಾತ್ರ ಬಳಕೆ ಮಾಡಬಹುದಾಗಿದೆ.
ಅಂತೆಯೇ ಇಂಟರ್ ನೆಟ್ ಬ್ಯಾಂಕಿಂಗ್ ಸೇವೆ ಹೊಂದಿರುವ ಗ್ರಾಹಕರ ಆನ್ ಲೈನ್ ಹಣದ ವಹಿವಾಟಿನ ಮಿತಿಯನ್ನು ಕೂಡ ಸಡಿಲಗೊಳಿಸಲಾಗಿದ್ದು, ಆನ್ ಲೈನ್ ಹಣದ ವಹಿವಾಟನ್ನು 5 ಲಕ್ಷಕ್ಕೆ ಏರಿಕೆ ಮಾಡಲಾಗಿದೆ.
ಎಸ್ ಬಿಐನ ವಿವಿಧ ಕಾರ್ಡ್ ಗಳ ಎಟಿಎಂ ವಿತ್ ಡ್ರಾ ಮಿತಿ ಇಂತಿದೆ.
ಎಸ್ ಬಿಐ ಕ್ಲಾಸಿಕ್ ಡೆಬಿಟ್ ಕಮ್ ಎಟಿಎಂ ಕಾರ್ಡ್
ಎಸ್ ಬಿಐ ಕ್ಲಾಸಿಕ್ ಡೆಬಿಟ್ ಕಮ್ ಎಟಿಎಂ ಕಾರ್ಡ್ ಹೊಂದಿರುವ ಖಾತೆದಾರರು ನಿತ್ಯ ಗರಿಷ್ಠ 40 ಸಾವಿರ ರುಗಳನ್ನು ವಿತ್ ಡ್ರಾ ಮಾಡಬಹುದಾಗಿದೆ. ಅಂತೆಯೇ ನಿತ್ಯ 50 ಸಾವಿರ ರು.ಗಳ ವರೆಗೂ ಹಣವನ್ನು ಆನ್ ಲೈನ್ ವಹಿವಾಟು ಮಾಡಬಹುದಾಗಿದೆ.
ಎಸ್ ಬಿಐ ಪ್ರೈಡ್ ಮಾಸ್ಟರ್ ಡೆಬಿಟ್-ಕಮ್-ಎಟಿಎಂ ಕಾರ್ಡ್
ಎಸ್ ಬಿಐ ಕ್ಲಾಸಿಕ್ ಡೆಬಿಟ್ ಕಮ್ ಎಟಿಎಂ ಕಾರ್ಡ್ ಹೊಂದಿರುವ ಖಾತೆದಾರರು ನಿತ್ಯ ಗರಿಷ್ಠ 1 ಲಕ್ಷ ರುಗಳನ್ನು ವಿತ್ ಡ್ರಾ ಮಾಡಬಹುದಾಗಿದೆ. ಅಂತೆಯೇ ನಿತ್ಯ 2 ಲಕ್ಷ ರು.ಗಳ ವರೆಗೂ ಹಣವನ್ನು ಆನ್ ಲೈನ್ ವಹಿವಾಟು ಮಾಡಬಹುದಾಗಿದೆ.
ಎಸ್ ಬಿಐ ಪ್ಲಾಟಿನಂ ಡೆಬಿಟ್-ಕಮ್-ಎಟಿಎಂ ಕಾರ್ಡ್
ಹೊಂದಿರುವ ಖಾತೆದಾರರು ನಿತ್ಯ ಗರಿಷ್ಠ 2 ಲಕ್ಷ ರುಗಳನ್ನು ವಿತ್ ಡ್ರಾ ಮಾಡಬಹುದಾಗಿದೆ. ಅಂತೆಯೇ ನಿತ್ಯ 5 ಲಕ್ಷ ರು.ಗಳ ವರೆಗೂ ಹಣವನ್ನು ಆನ್ ಲೈನ್ ವಹಿವಾಟು ಮಾಡಬಹುದಾಗಿದೆ.