ವಾಣಿಜ್ಯ

ಸಗಟು ಹಣದುಬ್ಬರ 4 ತಿಂಗಳಲ್ಲಿಯೇ ಅತಿ ಹೆಚ್ಚು ಏರಿಕೆ!

Srinivas Rao BV
ನವದೆಹಲಿ: ಭಾರತದ ಸಗಟು ಹಣದುಬ್ಬರ ಕಳೆದ 4 ತಿಂಗಳಲ್ಲಿಯೇ ಅತಿ ಹೆಚ್ಚು ಏರಿಕೆ ಕಂಡಿದ್ದು ಶೇ.3.24 ರಷ್ಟು ಏರಿಕೆ ಕಂಡಿದೆ. 
ಆಹಾರ ಪದಾರ್ಥಗಳ ಬೆಲೆ ಏರಿಕೆ ಹಾಗೂ ತೈಲ ಬೆಲೆ ಏರಿಕೆಯಿಂದ ಸಗಟು ಹಣದುಬ್ಬರ ಅತಿ ಹೆಚ್ಚು ಏರಿಕೆ ಕಂಡಿದ್ದು, ಜುಲೈ ನಲ್ಲಿ ಶೇ.1.88 ರಷ್ಟಿದ್ದ ಹಣದುಬ್ಬರ ಆಗಸ್ಟ್ ತಿಂಗಳಲ್ಲಿ ದರ ಶೇ.4.41 ಕ್ಕೆ ಏರಿಕೆಯಾಗಿದೆ.  ಇನ್ನು ಈ ವಾರ ಸರ್ಕಾರ ಬಿಡುಗಡೆ ಮಾಡಿದ್ದ ಅಂಕಿ-ಅಂಶಗಳ ಪ್ರಕಾರ ಚಿಲ್ಲರೆ ಹಣದುಬ್ಬರವೂ ಶೇ.3.36 ರಷ್ಟು ಏರಿಕೆಯಾಗಿದ್ದು, ಹಲವು ರಾಜ್ಯಗಳಲ್ಲಿ ಬರ ಉಂಟಾಗಿ ಆಹಾರ ಪದಾರ್ಥಗಳ ಬೆಲೆ ಏರಿಕೆ ಹಾಗೂ ತೈಲ ಬೆಲೆ ಏರಿಕೆಯಿಂದ ಹಣದುಬ್ಬರ ಏರಿಕೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 
ಇನ್ನು ಕೈಗಾರಿಕಾ ಉತ್ಪನ್ನದಲ್ಲಿ ಸುಧಾರಣೆಯಾಗಿದ್ದು, ಶೇ.1.2 ರಷ್ಟು ಏರಿಕೆಯಾಗಿದೆ. ಅದರೆ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಕಡಿಮೆ ಇದೆ. 
SCROLL FOR NEXT