ಬೆಂಗಳೂರು: ಇನ್ಫೋಸಿಸ್ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಸಂಜಯ್ ರಾಜಗೋಪಾಲನ್ ರಾಜೀನಾಮೆ ನೀಡಿದ್ದಾರೆ.
ಸಂಸ್ಥೆಯ ಮಾಜಿ ಎಂಡಿ, ಸಿಇಒ ವಿಶಾಲ್ ಸಿಕ್ಕಾ ರಾಜೀನಾಮೆ ನೀಡಿದ ಬೆನ್ನಲ್ಲೇ ರಾಜಗೋಪಾಲನ್ ಸಹ ರಾಜೀನಾಮೆ ನೀಡಿದ್ದು, ಲಿಂಕ್ಡ್ ಇನ್ ಪ್ರೊಫೈಲ್ ನಲ್ಲಿ ತಮ್ಮನ್ನು ಸ್ವತಂತ್ರ ಹಕ್ಕಿ ಎಂದು ಹೇಳಿಕೊಂಡಿದ್ದಾರೆ. ಕಳೆದ 3 ವರ್ಷಗಳಿಂದ ಇನ್ಫೋಸಿಸ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಜಯ್ ರಾಜಗೋಪಾಲನ್ ಡಿಸೈನ್ ಥಿಂಕಿಂಗ್ ವಿಭಾಗದ ಮುಖ್ಯಸ್ಥರಾಗಿದ್ದರು.
ವಿಶಾಲ್ ಸಿಕ್ಕಾ ಅವರೊಂದಿಗೇ ಇನ್ಫೋಸಿಸ್ ಸೇರಿದ್ದ ರಾಜಗೋಪಾಲನ್ ಸಿಕ್ಕಾ ರಾಜೀನಾಮೆ ಬೆನ್ನಲ್ಲೇ ಸಂಸ್ಥೆಯಿಂದ ಹೊರನಡೆಯುವ ನಿರೀಕ್ಷೆ ಇತ್ತು.