ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಫೋರ್ಬ್ಸ್ ಶತಕೋಟಿ ಒಡೆಯರ ಪಟ್ಟಿ: ಮಿತ್ತಲ್, ಟಾಟಾ ಮತ್ತು ವಿನೋದ್ ಖೋಸ್ಲಾ ಗೆ ಸ್ಥಾನ

ಫೋರ್ಬ್ಸ್ ತಯಾರಿಸಿದ ವಿಶ್ವದ 100 ಶ್ರೇಷ್ಠ ಉದ್ಯಮಿಗಳ ಪಟ್ಟಿಯಲ್ಲಿ ಮೂವರು ಭಾರತೀಯ ವಾಣಿಜ್ಯ ದಿಗ್ಗಜರಾದ ಲಕ್ಷ್ಮೀ ಮಿತ್ತಲ್, ರತನ್ ಟಾಟಾ ಮತ್ತು ವಿನೋದ್ ಖೋಸ್ಲಾ ಸ್ಥಾನ ಪಡೆದಿದ್ದಾರೆ.

ಫೋರ್ಬ್ಸ್ ಶತಕೋಟಿ ಒಡೆಯರ ಪಟ್ಟಿಯಲ್ಲಿ ಮಿತ್ತಲ್, ಟಾಟಾ ಮತ್ತು ವಿನೋದ್ ಖೋಸ್ಲಾ
Raghavendra Adiga
Updated On : 21 Sept 2017, 1:14 am
ನ್ಯೂಯಾರ್ಕ್: ಫೋರ್ಬ್ಸ್ ತಯಾರಿಸಿದ ವಿಶ್ವದ 100 ಶ್ರೇಷ್ಠ ಉದ್ಯಮಿಗಳ ಪಟ್ಟಿಯಲ್ಲಿ ಮೂವರು ಭಾರತೀಯ ವಾಣಿಜ್ಯ ದಿಗ್ಗಜರಾದ ಲಕ್ಷ್ಮೀ ಮಿತ್ತಲ್, ರತನ್ ಟಾಟಾ ಮತ್ತು ವಿನೋದ್ ಖೋಸ್ಲಾ ಸ್ಥಾನ ಪಡೆದಿದ್ದಾರೆ. 
ಏರ್‍ಸಲರ್ಸ್ ಮಿತ್ತಲ್ ಕಂಪನಿಯ ಅಧ್ಯಕ್ಷ ಹಾಗೂ ಸಿಒಇ ಲಕ್ಷ್ಮೀ ಮಿತ್ತಲ್, ರತನ್ ಟಾಟಾ ಸಮೂಹದ ಅಧ್ಯಕ್ಷ ರತನ್ ಟಾಟಾ ಹಾಗೂ ಸನ್ ಮೈಕ್ರೋಸಿಸ್ಟಮ್ಸ್ ಸಹ ಸಂಸ್ಥಾಪಕ ವಿನೋದ್ ಖೋಸ್ಲಾ ಫೋರ್ಬ್ಸ್ ಪಟ್ಟಿಯಲ್ಲಿರುವುದು ಭಾರತಕ್ಕೆ ಹೆಮ್ಮೆಯ ಸಂಗತಿಯಾಗಿದೆ.
ಮಿತ್ತಲ್ ಅವರ ಒಟ್ಟು ಆಸ್ತಿ ಮೌಲ್ಯ  16.5 ಬಿಲಿಯನ್ ಅಮೆರಿಕನ್ ಡಾಲರ್ ಆಗಿದ್ದರೆ ಮತ್ತು ವಿನೋದ್ ಖೋಸ್ಲಾ ಅವರದ್ದು 1.82 ಬಿಲಿಯನ್ ಅಮೆರಿಕನ್ ದಾಲರ್ ನಷ್ಟಿದೆ.ರತನ್ ಟಾಟಾ ಅವರ ಆಸ್ತಿ ಮೌಲ್ಯದ ವಿವರ ಲಭ್ಯವಾಗಿಲ್ಲ.

Advertisement

Advertisement

ಇನ್ನು ಪಟ್ಟಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಸ್ಥಾನ ಪಡೆದಿದ್ದಾರೆ. ಅವರನ್ನು ಟ್ರಂಪ್ ಆರ್ಗನೈಸೇಷನ್ ಮಾಲೀಕರು ಮತ್ತು ಅಮೆರಿಕದ 45ನೇ ಅಧ್ಯಕ್ಷರು ಎಂದು ಪಟ್ಟಿಯಲ್ಲಿ ಬಣ್ಣಿಸಲಾಗಿದೆ. 
ಅಮೇಝಾನ್ ಸಂಸ್ಥಾಪಕ ಜೆಫ್ ಬೆಝಾಸ್, ವರ್ಜಿನ್ ಗ್ರೂಪ್ ಸ್ಥಾಪಕ ರಿಚರ್ಡ್ ಬ್ರಾನ್ಸನ್, ಬರ್ಕ್‍ಶೈರ್ ಹ್ಯಾಥ್‍ವೆ ಸಿಒಇ ವಾರೆನ್ ಬಫೆಟ್, ಮೈಕೋಸಾಪ್ಟ್ ಸಹ ಸಂಸ್ಥಾಪಕ ಬಿಲ್‍ಗೇಟ್ಸ್ ಹಾಗೂ ನ್ಯೂಸ್ ಕಾರ್ಪ್ ಕಾರ್ಯಕಾರಿ ಅಧ್ಯಕ್ಷ ರೂಪರ್ಟ್ ಮರ್ಡೋಕ್ ಹೆಸರುಗಳೂ ಸಹ ಪಟ್ಟಿಯಲ್ಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement