ವಾಣಿಜ್ಯ

ಪ್ರಸಕ್ತ ಹಣಕಾಸು ವರ್ಷದಲ್ಲಿ 1.25 ಕೋಟಿ ಹೊಸ ತೆರಿಗೆದಾರರನ್ನು ಸೇರಿಸಲು ಐ-ಟಿ ಇಲಾಖೆ ಕ್ರಮ

Sumana Upadhyaya
ನವದೆಹಲಿ: ದೇಶದಲ್ಲಿ ತೆರಿಗೆ ಪಾವತಿ ಮೂಲವನ್ನು ವಿಸ್ತರಿಸಲು ಕೇಂದ್ರ ಸರ್ಕಾರದ ಯೋಜನೆ ಭಾಗವಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ 1.25 ಕೋಟಿ ಹೊಸ ತೆರಿಗೆ ಪಾವತಿದಾರರನ್ನು ಸೇರಿಸಲು ಆದಾಯ ತೆರಿಗೆ ಇಲಾಖೆಗೆ ಸೂಚಿಸಲಾಗಿದೆ.
ಪ್ರಸಕ್ತ ಹಣಕಾಸು ವರ್ಷದಿಂದ ತೆರಿಗೆ ಮೂಲವನ್ನು ಹೆಚ್ಚಿಸಲು ಮಹತ್ವದ ಕೇಂದ್ರೀಕೃತ ಪ್ರಯತ್ನವನ್ನು ನಡೆಸುವಂತೆ ಆದಾಯ ತೆರಿಗೆ ಇಲಾಖೆಗೆ ಯೋಜನೆಗಳ ನಿರ್ಧಾರ ಮಾಡುವ ಕೇಂದ್ರ ನೇರ ತೆರಿಗೆ ಮಂಡಳಿ ನಿರ್ದೇಶನ ಹೇಳಿದೆ.
 ಈ ಹಿಂದಿನ ವರ್ಷಗಳಲ್ಲಿ ಐಟಿ ರಿಟರ್ನ್ಸ್ ಸಲ್ಲಿಸದಿರುವ ಕಾನೂನಿನಡಿಯಲ್ಲಿ ಹೊಸದಾಗಿ ರಿಟರ್ನ್ಸ್ ಮಾಡಲು ಸಾಧ್ಯವಿರುವ 1,25 ಕೋಟಿ ಜನರನ್ನು ಸೇರಿಸಲು ಕೇಂದ್ರ ನೇರ ತೆರಿಗೆ ಮಂಡಳಿ ಹೇಳಿದೆ. ಹೈದರಾಬಾದ್ ಮತ್ತು ಪುಣೆ ಭಾಗಗಳಲ್ಲಿ ಅತಿ ಹೆಚ್ಚು 12.8 ಲಕ್ಷ ಮತ್ತು 11.8 ಲಕ್ಷ ಹೊಸ ತೆರಿಗೆ ಪಾವತಿದಾರರನ್ನು ಸೇರ್ಪಡೆ ಮಾಡುವ ಗುರಿ ಹೊಂದಲಾಗಿದೆ. ನಂತರದ ಸ್ಥಾನಗಳಲ್ಲಿ ಚೆನ್ನೈ 10.47 ಲಕ್ಷ ಹೊಸ ಐಟಿ ರಿಟರ್ನ್ಸ್ ಮತ್ತು ಚಂಡೀಗಢದಲ್ಲಿ 10.41 ಲಕ್ಷ ಹೊಸ ಪಾವತಿದಾರರಿದ್ದಾರೆ.
SCROLL FOR NEXT