ನವದೆಹಲಿ: ವಜ್ರದ ವ್ಯಾಪಾರಿ ನೀರವ್ ಮೋದಿ ಪಿಎನ್ಬಿ ವಂಚನೆ ಪ್ರಕರಣ ಸಂಬಂಧ ಜರ್ಮನಿಯ ಫ್ರಾಂಕ್ ಫರ್ಟ್ ಹಾಗೂ ಮಾರಿಷಸ್ ನಲ್ಲಿದ್ದ ಇಬ್ಬರು ಭಾರತೀಯ ಸ್ಟೇಟ್ ಬ್ಯಾಂಕ್ ಸಬ್ ಜನರಲ್ ಮ್ಯಾನೇಜರ್ ಮಟ್ಟದ ಅಧಿಕಾರಿಗಳನ್ನು ಸಿಬಿಐ ಇಂದು ಪ್ರಶ್ನಿಸಿದೆ.
ಪಿಎನ್ಬಿಯ ಬ್ರಾಡಿ ಹೌಸ್ ಶಾಖೆಯಿಂದ ಬಾರತೀಯ ಬ್ಯಾಂಕುಗಳ ವಿದೇಶೀ ಶಾಖೆಗಳ ಪರವಾಗಿ ಹೊರಡಿಸಲಾದ ನಕಲಿ ಸಾಲ ಮಂಜೂರಾತಿ ಪತ್ರಗಳನ್ನು (ಎಲ್ ಒಯುಎಸ್) ಪತ್ತೆ ಮಾಡುವ ಸಲುವಾಗಿ ಅಧಿಕಾರಿಗಳನ್ನು ಪ್ರಶ್ನಿಸಲಾಗಿದೆ ಎಂದು ತನಿಕಾ ಸಂಸ್ಥೆ ಹೇಳಿದೆ.
ಆರ್ ಬಿಐ ನ ಮಾರ್ಗದರ್ಶಿ ಸೂತ್ರಗಳನುಸಾರ ರತ್ನಗಳು ಮತ್ತು ಆಭರಣ ಕ್ಷೇತ್ರಗಳಲ್ಲಿನ ಎಲ್ ಒಯುಎಸ್ ಗಳಿಗೆ 90 ದಿನಗಳ ವಾಯಿದೆ ಇರಲಿದೆ. ಆದರೆ ಮೋದಿ ಮತ್ತು ಚೋಕ್ಸಿ ಕಂಪೆನಿಗಳಿಗೆ ಸಾಲ ಮಂಜೂರಾತಿ ಪತ್ರ ನೀಡುವ ಸಮಯದಲ್ಲಿ ಪಿಎನ್ಬಿ ಈ ಅಂಶವನ್ನು ತನ್ನ ಅನುಕೂಲಕ್ಕಾಗಿ ಕಡೆಗಣಿಸಿದೆ.
"ಖರೀದಿದಾರರಿಗೆ ಸಾಲವನ್ನು ವಿಸ್ತರಿಸುವ ಭಾರತೀಯ ಬ್ಯಾಂಕುಗಳ ಸಾಗರೋತ್ತರ ಶಾಖೆಗಳ ಅಬ್ಗೆಗೆ ಇದು ಸಂಶಯವನ್ನುಂಟು ಮಾಡಲಿದೆ" ಈ ಶಾಖೆಗಳು ಆರ್ಬಿಐ ಮಾರ್ಗದರ್ಶಿ ಸೂತ್ರಗಳನ್ನು ಉಲ್ಲಂಘಿಸುವ ಬಗ್ಗೆ ಎಚ್ಚರಿಕೆಯನ್ನೂ ನೀಡಿಲ್ಲ ಅಲ್ಲದೆ ನಕಲಿ ಎಲ್ ಒಯುಗಳನ್ನು ಪಡೆದು ಹಣ ವಿತರಣೆ ಮಾಡುವ ಕಾರ್ಯವನ್ನು ಮುಂದುವರಿಸಿದೆ ಎಂದು ಆರೋಪಿಸಲಾಗಿದೆ.
ವಿದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ಬ್ಯಾಂಕ್ ಅಧಿಕಾರಿಗಳ ವಿಚಾರಣೆ ಸಮಯದಲ್ಲಿ ಸಿಬಿಐ ಈ ನಿರ್ಣಾಯಕ ಅಂಶದ ಬಗ್ಗೆ ಪ್ರಶ್ನೆ ಮಾಡಿದೆ.
ಪಿಎನ್ಬಿ ಹೊರಡಿಸಿದ್ದ ಎಲ್ ಒಯುಗಳ ಕುರಿತಂತೆ ಯಾವುದೇ ಸಂದೇಹ ಹೊಂದದೆ ಮೋದಿ ಹಾಗೂ ಚೋಕ್ಸಿ ಕಂಪೆನಿಗಳಿಗೆ ಹೇಗೆ ಕ್ರೆಡಿಟ್ ಸೌಲಭ್ಯಗಳನ್ನು ವಿಸ್ತರಿಸಲಾಗಿತ್ತು ಎಂದು ಅಧಿಕಾರಿಗಳನ್ನು ಸಿಬಿಐ ಪ್ರಶ್ನಿಸಿದೆ.
2 ಬಿ;ಬಿ;ಲಿಯನ್ ಅಮೆರಿಕನ್ ಡಾಲರ್ ಮೊತ್ತದ ಹಗರಣ ಸಂಬಂಧ ಸಿಬಿಐ ಎಫ್ಐಆರ್ ದಾಖಲಿಸಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿತ್ತು. ಆದರೆ ಪ್ರಕರಣದ ಮುಖ್ಯ ಆರೋಪಿಗಳಾದ ನೀರವ್ ಮೋದಿ ಹಾಗೂ ಚೋಕ್ಸಿ ತಮ್ಮ ಕುಟುಂಬದವರೊಡನೆ ವಿದೇಶಕ್ಕೆ ತೆರಳಿದ್ದರು.
ನೀರವ್ ಮೋದಿ ಹಾಗೂ ಚೋಕ್ಸಿ ಭಾರತೀಯ ಬ್ಯಾಂಕುಗಳ ವಿದೇಶಿ ಶಾಖೆಗಳ ಪರವಾಗಿ 2 ಬಿ;ಲಿಯನ್ ಅಮೆರಿಕನ್ ಡಾಲರ್ ಮೊತ್ತದ ಎಲ್ ಒಯು ಹಾಗೂ ಫಾರಿನ್ ಲೆಟರ್ಸ್ ಆಫ್ ಕ್ರೆಡಿಟ್ ಪಡೆದಿರುವುದಾಗಿ ಸಿಬಿಐ ಆರೋಪಿಸಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos