ಕೈಗೆಟಕುವ ದರಕ್ಕೆ ಟ್ಯಾಕ್ಸಿ ಸಿಕ್ಕರೆ, ಶೇ.79 ಭಾರತೀಯರು ಸ್ವಂತಃ ಕಾರು ಖರೀದಿಸಲು ಬಯಸುವುದಿಲ್ಲ: ವರದಿ
ಭಾರತೀಯ ನಗರಗಳು ಏಷ್ಯಾದ ಇತರೆ ನಗರಗಳಿಗಿಂತ ಶೇ.149ರಷ್ಟು ಹೆಚ್ಚು ವಾಹನ ದಟ್ಟಣೆ ಹೊಂದಿವೆ ಎಂದು....
ನವದೆಹಲಿ: ಭಾರತೀಯ ನಗರಗಳು ಏಷ್ಯಾದ ಇತರೆ ನಗರಗಳಿಗಿಂತ ಶೇ.149ರಷ್ಟು ಹೆಚ್ಚು ವಾಹನ ದಟ್ಟಣೆ ಹೊಂದಿವೆ ಎಂದು ಉಬರ್ ನಿಯೋಜಿತ ಬೊಸ್ಟೋನ್ ಕನ್ಸಲ್ಟಿಂಗ್ ಗ್ರೂಪ್(ಬಿಸಿಜಿ) ವರದಿ ತಿಳಿಸಿದೆ.
ಬಿಸಿಜಿ ವರದಿ ಪ್ರಕಾರ, ಶೇ.89ರಷ್ಟು ಭಾರತೀಯರು ಮುಂದಿನ ಕೆಲವು ವರ್ಷಗಳಲ್ಲಿ ಹೊಸ ಕಾರು ಖರೀದಿಸುವ ಯೋಚನೆಯಲ್ಲಿದ್ದಾರೆ.
ಆದಾಗ್ಯೂ, ಕೈಗೆಟಕುವ ದರಕ್ಕೆ ಟ್ಯಾಕ್ಸಿ ಸೇವೆ ಲಭ್ಯವಾದರೆ, ಶೇ.79ರಷ್ಟು ಭಾರತೀಯರು ಸ್ವಂತಃ ಕಾರು ಖರೀದಿಸಲು ಬಯಸುವುದಿಲ್ಲ ವರದಿ ವಿವರಿಸಿದೆ.
ಬಿಸಿಜಿ ದೇಶಾದ್ಯಂತ ಸಮೀಕ್ಷೆ ನಡೆಸಿ 40 ಪುಟಗಳ ವರದಿ ನೀಡಿದ್ದು, ದೆಹಲಿ, ಕೊಲ್ಕತ್ತಾ, ಮುಂಬೈ ಮತ್ತು ಬೆಂಗಳೂರಿನಲ್ಲಿ ಟ್ಯಾಕ್ಸಿ ಸೇವೆ ಹೆಚ್ಚು ಪ್ರಯೋಜನಕರವಾಗಿದೆ ಎಂದು ಹೇಳಿದೆ.
ಉಬರ್ ಜಾಗತಿಕ ಸಿಒಒ ಬರ್ನಿ ಹರ್ಫೊರ್ಡ್, ಉಬರ್ ಉಬರ್ ಇಂಡಿಯಾ ಅಧ್ಯಕ್ಷ ಅಮಿತ್ ಜೈನ್ ಅವರ ನೇತೃತ್ವದಲ್ಲಿ ಬುಧವಾರ ವರದಿ ಬಿಡುಗಡೆ ಮಾಡಲಾಗಿದೆ.