ವಾಣಿಜ್ಯ

ಆರ್ ಬಿಐ-ಸರ್ಕಾರದ ನಡುವೆ ಮತ್ತೆ ಸಮರ: ಈ ಬಾರಿಯ ಕಾರಣವೇ ಬೇರೆ!

Srinivas Rao BV
ಹೈದರಾಬಾದ್: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ-ಹಣಕಾಸು ಸಚಿವಾಲಯದ ನಡುವಿನ ಒಂದು ಸುತ್ತಿನ ತಿಕ್ಕಾಟ ಅಂತ್ಯವಾಗಿರುವ ಬೆನ್ನಲ್ಲೇ ಮತ್ತೊಂದು ಭಿನ್ನಾಭಿಪ್ರಾಯ ತಲೆದೋರಿದೆ. ಈ ಬಾರಿ ಆರ್ಥಿಕ ಬಂಡವಾಳ ಚೌಕಟ್ಟನ್ನು ನಿರ್ಧರಿಸುವ ಸಮಿತಿ ರಚನೆಗೆ ಸಂಬಂಧಿಸಿದಂತೆ ಈ ಬಾರಿ ರಿಸರ್ವ್ ಬ್ಯಾಂಕ್ ಹಾಗೂ ಕೇಂದ್ರ ಸರ್ಕಾರದ ನಡುವೆ ತಿಕ್ಕಾಟ ಪ್ರಾರಂಭವಾಗಿದೆ. 
ಆರ್ ಬಿಐ ತನ್ನ ಬಳಿ ಹೆಚ್ಚುವರಿಯಾಗಿ ಸಂಗ್ರಹಣೆಯಾಗಿರುವ ಮೊತ್ತವನ್ನು ಕೇಂದ್ರ ಸರ್ಕಾರಕ್ಕೆ ವರ್ಗಾವಣೆ ಮಾಡಬೇಕಿದ್ದು, ಎಷ್ಟು ಮೊತ್ತವನ್ನು ವರ್ಗಾವಣೆ ಮಾಡಬೇಕೆಂಬುದನ್ನು ನಿರ್ಧರಿಸುವುದಕ್ಕೆ ಸಮಿತಿ ರಚನೆ ಮಾಡಲು ನ.26 ರಂದು ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಈ ಹಿಂದಿನ ಸಭೆಯ ನಿರ್ಧಾರದ ಪ್ರಕಾರ ಒಂದು ವಾರದಲ್ಲಿ ಸಮಿತಿ ರಚನೆಯಾಗಿ 90 ದಿನಗಳಲ್ಲಿ ವರದಿ ಸಲ್ಲಿಕೆಯಾಗಬೇಕಿತ್ತು. ಆದರೆ ಸಮಿತಿಯಲ್ಲಿ ಇರಬೇಕಾದ ಸದಸ್ಯರ ಬಗ್ಗೆ ಈಗ ಆರ್ ಬಿಐ-ಕೇಂದ್ರ ಸರ್ಕಾರದ ನಡುವೆ ತಿಕ್ಕಾಟ ಉಂಟಾಗಿದ್ದು, ಸರ್ಕಾರ ಆರ್ ಬಿಐ ನ ಮಾಜಿ ಗೌರ್ನರ್ ಬಿಮಾಲ್ ಜಲನ್ ಅವರು ಸಮಿತಿಯಲ್ಲಿರಬೇಕೆಂದು ಪಟ್ಟು ಹಿಡಿದ್ದಿದ್ದರೆ ಆರ್ ಬಿಐ ನ ಮಾಜಿ ಡೆಪ್ಯುಟಿ ಗೌರ್ನರ್ ರಾಕೇಶ್ ಮೋಹನ್ ಇರಬೇಕೆಂದು ಆರ್ ಬಿಐ ಪಟ್ಟು ಹಿಡಿದಿದೆ. ಆದರೆ ಈ ವರೆಗೂ ಸಮಿತಿ ಸದಸ್ಯರನ್ನು ಅಂತಿಮಗೊಳಿಸಲಾಗಿಲ್ಲ. ಸಮಿತಿಯ ಸದಸ್ಯರು ಯಾರಿರಬೇಕೆಂಬುದರ ಬಗ್ಗೆ ಸ್ವಲ್ಪ ಮಟ್ಟಿಗಿನ ಗೊಂದಲಗಳಿವೆ. ಒಂದು ವಾರದಲ್ಲಿ ಅದನ್ನು ಬಗೆಹರಿಸಲಾಗುತ್ತದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ಲಭ್ಯವಾಗಿದೆ. 
ಸಮಿತಿ ಯಾವ ರೀತಿಯಲ್ಲಿರಬೇಕು ಸಮಿತಿಗೆ ಕೋ ಚೇರ್‌ ನ್ನು ನೇಮಕ ಮಾಡಬೇಕೇ? ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು,  ಒಂದು ವೇಳೆ ಈ ಪ್ರಸ್ತಾವನೆ ಕಾರ್ಯರೂಪಕ್ಕೆ ಬಂದಲ್ಲಿ ಸರ್ಕಾರ ಹಾಗೂ ಆರ್ ಬಿಐ ನ ಪರವಾಗಿ ಪ್ರಬಲವಾಗಿ ನಿಲ್ಲುವ ಎರಡು ಪ್ರತ್ಯೇಕ ಪ್ರತಿನಿಧಿಗಳು ಒಟ್ಟಿಗೆ ಇರಲಿರುವ ಸಮಿತಿ ಇದಾಗಿರಲಿದೆ. ಆದರೆ ಯಾರ ಮಾತು ಅಂತಿಮವಾಗಿರಲಿದೆ ಎಂಬ ಬಗ್ಗೆ ಈ ವರೆಗೂ ಸ್ಪಷ್ಟನೆ ಇಲ್ಲ.  ಡಿ.05 ರಂದು ಎಂಪಿಸಿ ಸಭೆ ನಡೆದ ಬಳಿಕ ಗೌರ್ನರ್ ಹಾಗೂ ಹಣಕಾಸು ಸಚಿವರು ಭೇಟಿ ಮಾಡಲಿದ್ದು ಈ ಬಗ್ಗೆ ಚರ್ಚಿಸಲಿದ್ದಾರೆ. ಪ್ರಸ್ತಾವಿತ ಸಮಿತಿಗೆ ಆರ್ ಬಿಐ, ಸರ್ಕಾರೇತರ ಸದಸ್ಯರೊಬ್ಬರು ಮುಖ್ಯಸ್ಥರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. 
SCROLL FOR NEXT