ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಮತ್ತೆ ಇಳಿದ ಪೆಟ್ರೋಲ್-ಡೀಸೆಲ್ ದರ; ಬೆಂಗಳೂರು ಸೇರಿ ಮೆಟ್ರೋ ನಗರ ಇಂದಿನ ದರ ಪಟ್ಟಿ!

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ದರ ಮತ್ತೆ ಇಳಿಕೆಯತ್ತ ಸಾಗಿದ್ದು, ಇದರಿಂದಾಗಿ ದೇಶದಲ್ಲಿ ಸೋಮವಾರವೂ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಅಲ್ಪ ಪ್ರಮಾಣದ...

ಸಂಗ್ರಹ ಚಿತ್ರ
Vishwanath S
Updated On : 24 Dec 2018, 3:11 am
ಮುಂಬೈ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ದರ ಮತ್ತೆ ಇಳಿಕೆಯತ್ತ ಸಾಗಿದ್ದು, ಇದರಿಂದಾಗಿ ದೇಶದಲ್ಲಿ ಸೋಮವಾರವೂ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಅಲ್ಪ ಪ್ರಮಾಣದ ಇಳಿಕೆ ಕಂಡುಬಂದಿದೆ.
ಇಂದು ಪೆಟ್ರೋಲ್ 21 ಪೈಸೆ ಮತ್ತು ಡೀಸೆಲ್ ದರಲ್ಲಿ 18 ಪೈಸೆಯಷ್ಟು ಇಳಿಕೆಯಾಗಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 21 ಪೈಸೆ ಯಷ್ಟು ಇಳಿಕೆಯಾಗಿ  ಪೆಟ್ರೋಲ್‌ ದರ ಲೀಟರ್‌ಗೆ 70.39 ರೂ ಗೆ ಇಳಿಕೆಯಾಗಿದೆ. ಅಂತೆಯೇ ಡೀಸೆಲ್ ದರದಲ್ಲಿ18 ಪೈಸೆಯಷ್ಟು ಇಳಿಕೆಯಾಗಿದ್ದು ಡೀಸೆಲ್‌ ದರ 64.15 ರೂ.ಗೆ ಇಳಿಕೆಯಾಗಿದೆ.
ಇನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ ದರ 21 ಪೈಸೆ ಇಳಿಕೆಯೊಂದಿಗೆ 69.86 ರೂ, ಮತ್ತು ಡೀಸೆಲ್‌ ದರ 18 ಪೈಸೆ ಇಳಿಕೆಯೊಂದಿಗೆ 63.83 ರೂ ಗಳಾಗಿವೆ. ದೇಶದ ವಾಣಿಜ್ಯ ರಾಜಧಾನಿ ಮುಂಬಯಿಯಲ್ಲಿ ಇಂದಿನ ಪೆಟ್ರೋಲ್‌ ದರ 75.45 ರೂ (21 ಪೈಸೆ ಇಳಿಕೆ), ಡೀಸೆಲ್ ಬೆಲೆ 66.76 ರೂ (19 ಪೈಸೆ ಇಳಿಕೆ) ಆಗಿದೆ. 

Advertisement

Advertisement

ಕೋಲ್ಕತಾದಲ್ಲಿ ಇಂದಿನ ಪೆಟ್ರೋಲ್‌ ಬೆಲೆ 71.93 ರೂ (20 ಪೈಸೆ ಇಳಿಕೆ) ಮತ್ತು ಡೀಸೆಲ್ ಬೆಲೆ 65.56 ರೂ (18 ಪೈಸೆ ಇಳಿಕೆ) ಗಳಾಗಿವೆ.  ಚೆನ್ನೈನಲ್ಲಿ ಇಂದಿನ ಪೆಟ್ರೋಲ್‌ ಬೆಲೆ 72.45 ರೂ. (21 ಪೈಸೆ ಇಳಿಕೆ), ಡೀಸೆಲ್‌ ಬೆಲೆ 67.35 ರೂ (19 ಪೈಸೆ ಇಳಿಕೆ) ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ ಇಂದಿನ ಬೆಲೆ 3,243 ರೂ ಆಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement