ನವದೆಹಲಿ: ರೂ.200 ಹಾಗೂ ರೂ.2,000 ಬೆಲೆ ಹೊಸ ನೋಟುಗಳನ್ನು ಬಿಡುಗಡೆ ಮಾಡಿದ್ದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್'ಬಿಐ), ಇದೀಗ ರೂ.20 ಬೆಲೆ ಹೊಸ ನೋಟುಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ.
ರೂ.500 ಹಾಗೂ 1,000 ಮುಖಬೆಲೆ ದುಬಾರಿ ನೋಟುಗಳ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿದ ಬಳಿಕ ಆರ್'ಬಿಐ ರೂ.50, ರೂ.100, ರೂ.500, ರೂ.200 ಹಾಗೂ ರೂ.2,000 ಮುಖಬೆಲೆಯ ಹೊಸ ನೋಟುಗಳನ್ನು ಬಿಡುಗಡೆ ಮಾಡಿತ್ತು.
2016ರ ನವೆಂಬರ್ ಬಳಿಕ ಆರ್'ಬಿಐ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಭಾವಚಿತ್ರವನ್ನು ಹೊಂದಿರುವ ಹೊಸ ನೋಟುಗಳನ್ನು ಪರಿಚಯಿಸುತ್ತಿದೆ. ಈ ಹೊಸ ನೋಟುಗಳು ಹಿಂದಿನ ನೋಟುಗಳಿಗಿಂತ ಗಾತ್ರ ಹಾಗೂ ವಿನ್ಯಾಸದಲ್ಲಿ ಭಿನ್ನತೆಗಳನ್ನು ಹೊಂದಿದೆ.
2016 ಮಾರ್ಚ್ 31ರವರೆಗೂ ರೂ.20 ಮುಖಬೆಲೆ ಒಟ್ಟು 4.92 ಬಿಲಿಯನ್ ರಷ್ಟು ನೋಟುಗಳು ಚಾಲನೆಯಲ್ಲಿರುವುದಾಗಿ ತಿಳಿದುಬಂದಿದೆ. 2018ರ ಮಾರ್ಚ್ ವೇಳೆ ಇದರ ಚಾಲನೆ ದುಪ್ಪಟ್ಟಾಗಿದೆ ಎಂದು ಹೇಳಲಾಗುತ್ತಿದೆ.