ಪಿಂಪಲ್ ಗಾನ್ ಮಾರ್ಕೆಟ್ ನಲ್ಲಿ ಮಾರಾಟಕ್ಕಾಗಿ ಇಟ್ಟಿರುವ ಪ್ಯಾಕ್ ಮಾಡಿರುವ ಈರುಳ್ಳಿ ಚಿತ್ರ 
ವಾಣಿಜ್ಯ

ಈರುಳ್ಳಿ ಮೇಲಿನ ಕನಿಷ್ಟ ರಪ್ತು ಬೆಲೆ ರದ್ದುಗೊಳಿಸಿದ ಕೇಂದ್ರ ಸರ್ಕಾರ

ಈರುಳ್ಳಿ ರಪ್ತು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎಲ್ಲಾ ವಿಧದ ಈರುಳ್ಳಿಯ ಕನಿಷ್ಠ ರಪ್ತುಬೆಲೆಯನ್ನು ಕೇಂದ್ರಸರ್ಕಾರ ರದ್ದುಗೊಳಿಸಿದೆ.

ನವದೆಹಲಿ :ಈರುಳ್ಳಿ ರಪ್ತು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎಲ್ಲಾ ವಿಧದ ಈರುಳ್ಳಿಯ ಕನಿಷ್ಠ ರಪ್ತು ಬೆಲೆಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ.

 ಈ ಸಂಬಂಧ ವಿದೇಶಿ ವ್ಯಾಪಾರ ಸಚಿವಾಲಯದ ಮಹಾನಿರ್ದೇಶಕರು ನಿನ್ನೆ ಅಧಿಕೃತ ಆದೇಶಹೊರಡಿಸಿದ್ದು, ಮುಂದಿನ ಆದೇಶದವರೆಗೂ ಈರುಳ್ಳಿ ಬೆಳೆಯ ಕನಿಷ್ಠ ರಪ್ತು ಬೆಲೆಯನ್ನು ರದ್ದುಗೊಳಿಸಿರುವುದಾಗಿ ತಿಳಿಸಿದ್ದಾರೆ. ಯಾವುದೇ ಕನಿಷ್ಠ ರಪ್ತು ಬೆಲೆ ಇಲ್ಲದೆ ಎಲ್ಲಾ ವಿಧದ ಈರುಳ್ಳಿ ಬೆಳೆಗಳನ್ನು ರಪ್ತು ಮಾಡಬಹುದೆಂದು ಅವರು ಹೇಳಿದ್ದಾರೆ.

ಈರುಳ್ಳಿ ಮೇಲಿನ ಕನಿಷ್ಠ ರಪ್ತು ಬೆಲೆಯನ್ನು ರದ್ದುಗೊಳಿಸಲಾಗಿದೆ. ಎಲ್ಲಾ ವಿಧದ ಈರುಳ್ಳಿಗಳನ್ನು ಈಗ ರಪ್ತು ಮಾಡಬಹುದಾಗಿದೆ. ತೋಟಗಾರಿಕಾ ಬೆಳೆಗಳ ರಪ್ತು ಉತ್ತೇಜಿಸಲು ಸರ್ಕಾರ ಎಲ್ಲಾ ಕ್ರಮ ಕೈಗೊಂಡಿರುವುದಾಗಿ ವಾಣಿಜ್ಯ  ಸಚಿವ ಸುರೇಶ್ ಪ್ರಭು ಟ್ವೀಟ್ ಮಾಡಿದ್ದಾರೆ .

ಕಳೆದ ವರ್ಷದ ಅಂತ್ಯಭಾಗದಲ್ಲಿ ಈರುಳ್ಳಿ ಬೆಲೆ ಶೇ. 400ರಷ್ಟು ಏರಿಕೆಯಾಗಿತ್ತು. ಆ ಸಂದರ್ಭದಲ್ಲಿ ಸರ್ಕಾರ ಪ್ರತಿ ಟನ್ ಈರುಳ್ಳಿಗೆ 850 ಡಾಲರ್ ಕನಿಷ್ಠ ರಪ್ತು ಬೆಲೆ ನಿಗದಿಪಡಿಸಿತ್ತು. ಇದರಿಂದಾಗಿ ಎಲ್ಲಾ ದೇಶಿ ಮಾರ್ಕೆಟ್ ಗಳಲ್ಲಿ ಈರುಳ್ಳಿ ದಾಸ್ತಾನು ಹೆಚ್ಚಾಗಿ  ಕಂಡುಬಂದಿತ್ತು.

ಕಳೆದ ವರ್ಷ ಈರುಳ್ಳಿ ಬೆಲೆ ಶೇ.400ರಷ್ಟು ಏರಿಕೆ
ದೇಶದಲ್ಲಿಯೇ ಅತಿದೊಡ್ಡ ಈರುಳ್ಳಿ ಸಗಟು ಮಾರುಕಟ್ಟೆಗಳಾದ  ಲಾಸಾಲ್ ಗಾನ್, ಪಿಂಪಲ್ ಗಾನ್ ಮತ್ತು ಬೆಂಗಳೂರಿನಲ್ಲಿ ಕಳೆದ ವರ್ಷದಲ್ಲಿ ಅಂತ್ಯದಲ್ಲಿ ಈರುಳ್ಳಿ ಬೆಲೆಯಲ್ಲಿ ಶೇ. 400ರಷ್ಟು ಏರಿಕೆಯಾಗಿತ್ತು. ಇದರಿಂದಾಗಿ ಎಲ್ಲಾ ಮಾರ್ಕೆಟ್ ಗಳಲ್ಲಿ ವ್ಯಾಪಾರವಿಲ್ಲದೆ ಮಾರ್ಕೆಟ್ ಗಳಿಗೆ ಬರುತ್ತಿದ್ದ ವಾಹನಗಳ ಸಂಖ್ಯೆಯಲ್ಲಿ ಶೇ.30ರಷ್ಟು ಕಡಿಮೆಯಾಗಿತ್ತು.

ದೇಶದ ವಿವಿಧ ಭಾಗಗಳಲ್ಲಿ  ಈರುಳ್ಳಿ ಬೆಲೆಯಲ್ಲಿ ಇಳಿಕೆ ಕಂಡುಬರದ ಹಿನ್ನೆಲೆಯಲ್ಲಿ ಆರು ತಿಂಗಳ ಕಾಲ ಪ್ರತಿ ಕೆಜಿ ಈರುಳ್ಳಿ ಬೆಲೆ 40ರಿಂದ 50 ರೂ. ಆಗಿತ್ತು. ಸಣ್ಣ ಮಾರ್ಕೆಟ್ ಗಳಲ್ಲೂ ಕೂಡಾ ಸಾಮಾನ್ಯದರ ನೋಡಲು ಸಾಧ್ಯವಿರಲಿಲ್ಲ. ಉತ್ಪಾದನೆಯಲ್ಲಿ ಕುಂಠಿತಗೊಂಡಿದ್ದರಿಂದ ಈರುಳ್ಳಿ ಬೆಲೆಯಲ್ಲಿ ಇಳಿಕೆಯಾಗಲಿಲ್ಲ ಎಂದು ತೋಟಗಾರಿಕೆ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

ಮಹಾರಾಷ್ಟ್ರ. ಗುಜರಾತ್ ಹಾಗೂ ಮಧ್ಯಪ್ರದೇಶದಿಂದ ಹೊಸ ಬೆಳೆ ಬರಲಿದ್ದು, ಮುಂದಿನ ದಿನಗಳಲ್ಲಿ ಈರುಳ್ಳಿ ಬೆಲೆ ಒಂದು ಹಂತಕ್ಕೆ ಬರಲಿದೆ ಎಂದು ಅವರು ತಿಳಿಸಿದ್ದಾರೆ.

ಈರುಳ್ಳಿ ಪೂರೈಕೆ ಕಡಿಮೆಯಾಗಿರುವ ಕಾರಣ ಮಹಾರಾಷ್ಟ್ರ ಮಾರ್ಕೆಟ್ ಗಳಿಗೆ ಬರುವ ವಾಹನಗಳ ಸಂಖ್ಯೆಯಲ್ಲಿ ಕಡಿಮೆಯಾಗಿದೆ ಎಂದು ರಾಜ್ಯಸಭೆಗೆ ನಿನ್ನೆ ತೋಟಗಾರಿಕೆ ಇಲಾಖೆ ಮಾಹಿತಿ ನೀಡಿದ್ದು, ಮಹಾರಾಷ್ಟ್ರ, ಸೋಲಾಪುರ, ನಾಸಿಕ್ , ಸೇರಿದಂತೆ ಹಲವೆಡೆಯಲ್ಲಿನ ಹವಾಮಾನ ವೈಫರೀತ್ಯವೇ ಇದಕ್ಕೆ ಕಾರಣ ಎಂದು ತಿಳಿಸಿದೆ.

ಕಳೆದ ವರ್ಷ  ಮಧ್ಯಪ್ರದೇಶದಿಂದ 6, 51 ಸಾವಿರ ಮೆಟ್ರಿಕ್ ಟನ್ ಹಾಗೂ ರಾಜಸ್ತಾನದಿಂದ 20 ಸಾವಿರ ಮೆಟ್ರಿಕ್ ಟನ್  ಈರುಳ್ಳಿ ಸಂಗ್ರಹಣೆಗೆ ಕೇಂದ್ರಸರ್ಕಾರ ಅನುಮೋದನೆ ನೀಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?