ವಾಣಿಜ್ಯ

2017 ನೇ ಸಾಲಿನಲ್ಲಿ ಏರ್ ಇಂಡಿಯಾದ ಲಾಭ ದುಪ್ಪಟ್ಟು!

Srinivas Rao BV
ನವದೆಹಲಿ: ನಿರಂತರವಾಗಿ ಸುಧಾರಣೆ ಕಾಣುತ್ತಿರುವ ಏರ್ ಇಂಡಿಯಾ ವಿಮಾನ ಸಂಸ್ಥೆ 2017 ನೇ ಆರ್ಥಿಕ ವರ್ಷದಲ್ಲಿ ದುಪ್ಪಟ್ಟು ಆದಾಯ ಗಳಿಸಿದೆ. 
ಸರ್ಕಾರದ ಮಾಹಿತಿಯ ಪ್ರಕಾರ ಏರ್ ಇಂಡಿಯಾ 2017 ರಲ್ಲಿ 298.03 ಕೋಟಿ ಆದಾಯ ಗಳಿಸಿದ್ದು, ಆದಾಯ ದುಪ್ಪಟ್ಟಾಗಿದೆ. ಏರ್ ಇಂಡಿಯಾಗೆ 5,765.16 ಕೋಟಿ ರೂಪಾಯಿ ಸಾಲವಿದ್ದು, ಬಂಡವಾಳ ಹಿಂತೆಗೆತಕ್ಕೊಳಗಾಗಿರುವ ವಿಮಾನ ಸಂಸ್ಥೆ 2015 ನೇ ಸಾಲಿನಲ್ಲಿ 105 ಕೋಟಿ ರೂಪಾಯಿ ಲಾಭ ಗಳಿಸಿತ್ತು.  
ಕೇಂದ್ರ ಸರ್ಕಾರ ರೂಪಿಸಿದ್ದ ಯೋಜನೆಯಡಿ ಏರ್ ಇಂಡಿಯಾ ಸಂಸ್ಥೆ ಕಾರ್ಯನಿರ್ವಹಣೆ ಹಾಗೂ ಲಾಭ ಗಳಿಸುವಿಕೆಯಲ್ಲಿ ನಿರಂತರವಾಗಿ ಸುಧಾರಣೆ ಕಾಣುತ್ತಿದೆ, ಎಂದು ವಿಮಾನಯಾನ ಖಾತೆಯ ರಾಜ್ಯ ಸಚಿವ ಜಯಂತ್ ಸಿನ್ಹಾ ಲೋಕಸಭೆಗೆ ತಿಳಿಸಿದ್ದಾರೆ. 
SCROLL FOR NEXT