ಮುಂಬೈ: ಬಜೆಟ್ ಮಂಡನೆ ಬಳಿಕ ಸತತ ಕುಸಿತ ಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ಇದೀಗ ಏರಿಕೆಯತ್ತ ಮುಖ ಮಾಡಿದ್ದು, ಬುಧವಾರ ಸೆನ್ಸೆಕ್ಸ್ 150 ಅಂಕಗಳ ಏರಿಕೆ ಕಂಡಿದೆ.
ಅಮೆರಿಕದ ವಾಲ್ ಸ್ಟ್ರೀಟ್ ಮತ್ತು ಏಷ್ಯನ್ ಮಾರುಕಟ್ಟೆಗಳಲ್ಲಿನ ಸಕಾರಾತ್ಮಕ ವಹಿವಾಟಿನ ಪರಿಣಾಮ ಭಾರತೀಯ ಷೇರುಮಾರುಕಟ್ಟೆ ಕೂಡ ಚೇತರಿಕೆ ಕಂಡಿದ್ದು, ಸೆನ್ಸೆಕ್ಸ್ ಇಂದು 150 ಅಂಕಗಳ ಏರಿಕೆ ಕಾಣುಲ ಮೂಲಕ 34,175.21 ಅಂಕಗಳಿಗೆ ಏರಿಕೆಯಾಗಿದೆ. ಅಂತೆಯೇ ನಿಫ್ಟಿ ಕೂಡ ಅಲ್ಪ ಚೇತರಿಕೆ ಕಂಡಿದ್ದು, 10,600ರ ಅಂಕಗಳ ಗಡಿಗೇರಿದೆ.
ಇನ್ನು ಇಂದಿನ ಆರಂಭಿಕ ವಹಿವಾಟಿನಲ್ಲಿ ಉಕ್ಕು ಮತ್ತು ಐಟಿ ಕ್ಷೇತ್ರದ ಷೇರುಗಳು ಮೌಲ್ಯ ಹೆಚ್ಚಿಸಿಕೊಂಡಿವೆ. ನಿನ್ನೆ ಕೂಡ ಏರುಗತಿಯಲ್ಲೇ ಭಾರತೀಯ ಷೇರುಮಾರುಕಟ್ಟೆ ವ್ಯವಹಾರ ಅಂತ್ಯವಾಗಿತ್ತು. ನಿನ್ನೆ ಸೆನ್ಸೆಕ್ಸ್ 295 ಅಂಕಗಳ ಏರಿಕೆ ಕಂಡಿತ್ತು.