ಸಾಂದರ್ಭಿಕ ಚಿತ್ರ 
ವಾಣಿಜ್ಯ

ನೀರವ್ ಮೋದಿ ವಂಚನೆ ಪ್ರಕರಣ: ಪಿಎನ್ಬಿ ಮತ್ತು ಇತರ ಬ್ಯಾಂಕುಗಳಿಗೆ ಆದ ನಷ್ಟದ ಪ್ರಮಾಣ ಬಗ್ಗೆ ನಿಖರತೆಯಿಲ್ಲ

ವಜ್ರೋದ್ಯಮಿ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 11,400 ಕೋಟಿ ರೂಪಾಯಿ ....

ಮುಂಬೈ: ವಜ್ರೋದ್ಯಮಿ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 11,400 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ ಎಂಬ ವರದಿ ಹೊರಬಂದು ಎರಡು ದಿನಗಳು ಕಳೆದಿದ್ದು, ಪಿಎನ್ ಬಿ ಮತ್ತು ಇತರ ಬ್ಯಾಂಕುಗಳಿಗೆ ಆಗಿರುವ ನಷ್ಟ ಒಗಟಾಗಿಯೇ ಉಳಿದಿದೆ.
2011ರಿಂದ ನೀರವ್ ಮೋದಿ ಮತ್ತು ಅವರ ಸಂಸ್ಥೆಗಳು 1.77 ಶತಕೋಟಿ ಡಾಲರ್ ಹಣವನ್ನು ಬ್ಯಾಂಕುಗಳಿಂದ ಸಾಲ ಪಡೆದಿವೆ. ಆದರೆ ಅಸ್ಪಷ್ಟವಾಗಿರುವ ಸಂಗತಿಯೆಂದರೆ, ನೀರವ್ ಮೋದಿಯವರಿಂದ ಬ್ಯಾಂಕಿಗೆ ಬರಲಿರುವ ಮೊತ್ತ ಮತ್ತು ಅವರು ಇದುವರೆಗೆ ಬ್ಯಾಂಕಿಗೆ ಎಷ್ಟು ಹಣ ಪಾವತಿಸಿದ್ದಾರೆ ಎಂಬುದು.
11,400 ಕೋಟಿ ರೂ ವಂಚನೆಯಲ್ಲಿ ಪ್ರತಿವರ್ಷದಂತೆ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಹಣ ಪಾವತಿ ಮಾಡಲಾಗಿದೆಯೇ ಎಂಬ ಬಗ್ಗೆ ವಿಚಾರಣೆ ನಡೆಯಬೇಕಿದೆ. ಕಳೆದ ತಿಂಗಳು ಸಿಬಿಐಗೆ ಸಲ್ಲಿಸಿರುವ ಹೇಳಿಕೆಯಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕು, 281 ಕೋಟಿ ರೂಪಾಯಿಗಳಷ್ಟು ಸಾರ್ವಜನಿಕ ಹಣವನ್ನು ಬ್ಯಾಂಕಿಗೆ ವಂಚನೆ ಮಾಡಲಾಗಿದೆ. ಅಮಾನತುಗೊಂಡ ಬ್ಯಾಂಕಿನ ಅಧಿಕಾರಿಗಳು ಹಣವನ್ನು ಬೇರೆಡೆಗೆ ವರ್ಗಾಯಿಸಿರುವ ಸಾಧ್ಯತೆ ಬಗ್ಗೆ ಸಂಶಯವಿದೆ.
ಇಲ್ಲಿ ಅನೇಕ ಪ್ರಶ್ನೆಗಳು ಎದುರಾಗುತ್ತವೆ.ಅವುಗಳಲ್ಲಿ ಮುಖ್ಯವಾದದ್ದು ಬ್ಯಾಂಕಿಗೆ ಬರಬೇಕಾಗಿರುವ ಹಣ. ಡೈಮಂಡ್ ಆರ್ ಯುಎಸ್, ಸೋಲಾರ್ ಎಕ್ಸ್ ಪರ್ಟ್ ಅಂಡ್ ಸ್ಟೆಲ್ಲರ್ ಡೈಮಂಡ್ ಅನಧಿಕೃತ ಎಲ್ ಒಯು ಪತ್ರದ ಮೂಲಕ ಪಂಜಾಬ್ ನ್ಯಾಷನಲ್ ಬ್ಯಾಂಕು ಉದ್ಯೋಗಿಗಳು ಹಣ ಬಿಡುಗಡೆ ಮಾಡಿದ್ದಾರೆ.
2017ರಲ್ಲಿ, ಅಲಹಾಬಾದ್ ಬ್ಯಾಂಕು ಮತ್ತು ಆಕ್ಸಿಸ್ ಬ್ಯಾಂಕುಗಳ ಹಾಂಕಾಂಗ್ ನಲ್ಲಿರುವ ಶಾಖೆಗಳ ಮೂಲಕ 281 ಕೋಟಿ ರೂಪಾಯಿಗಳನ್ನು ಬಿಡುಗಡೆಮಾಡಲು 8 ನಕಲಿ ಎಲ್ ಒಯುಗಳನ್ನು ಬಳಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP protest: ಮಮತಾ ಬ್ಯಾನರ್ಜಿ, ನೇಹಾ ಬೋರಾ, ಯೋಗೇಂದ್ರ ಯಾದವ್ ವಶಕ್ಕೆ ಪಡೆದ ಪೊಲೀಸರು

CEC ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ಪ್ರತಿಭಟನೆ ವೇಳೆ 2 ಪೊಲೀಸರಿಗೆ ಕಲ್ಲೇಟು!