"ತಂತ್ರಜ್ಞಾನ ಸ್ನೇಹಿ ಜನಸಂಖ್ಯೆ ಹೊಂದಿರುವ ಭಾರತವು ಭವಿಷ್ಯದ ತಂತ್ರಜ್ಞಾನ ವೇದಿಕೆಯಾಗಿದೆ: ಪ್ರಧಾನಿ ಮೋದಿ
"ತಂತ್ರಜ್ಞಾನದ ಸ್ನೇಹಿ ಜನಸಂಖ್ಯೆ ಹೊಂದಿರುವ ಭಾರತವು ಭವಿಷ್ಯದ ತಂತ್ರಜ್ಞಾನ ಸಾಮರ್ಥ್ಯಕ್ಕೆ ವೇದಿಕೆಯಾಗಿದೆ
ಹೈದರಾಬಾದ್: "ತಂತ್ರಜ್ಞಾನದ ಸ್ನೇಹಿ ಜನಸಂಖ್ಯೆ ಹೊಂದಿರುವ ಭಾರತವು ಭವಿಷ್ಯದ ತಂತ್ರಜ್ಞಾನ ಸಾಮರ್ಥ್ಯಕ್ಕೆ ವೇದಿಕೆಯಾಗಿದೆ" ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ, ಎಲ್ಲಾ ಕ್ಷೇತ್ರಗಳಲ್ಲಿ ದೇಶವು ಡಿಜಿಟಲ್ ನಾವೀನ್ಯತೆಯ ಹಾಟ್ ಸ್ಪಾಟ್ ಆಗಿದೆ ಅವರು ಹೇಳಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿಗಳು ಅವರು ವಮಾಹಿತಿ ತಂತ್ರಜ್ಞಾನದ ವಿಶ್ವ ಕಾಂಗ್ರೆಸ್ 2018ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದಲ್ಲಿ 100 ಲಕ್ಷ ಮೊಬೈಲ್ ಫೋನ್ಗಳು, 120 ಕೋಟಿ ಆಧಾರ್ ಮತ್ತು 50 ಕೋಟಿ ಅಂತರ್ಜಾಲ ಬಳಕೆದಾರರಿದ್ದಾರೆ. ಒಂದು ಲಕ್ಷ ಹಳ್ಳಿಗಳು ಆಪ್ಟಿಕಲ್ ಫೈಬರ್ ಸಂಪರ್ಕ ಹೊಂದಿದೆ.
"ಡಿಡಿಜಿಟಲ್ ಇಂಡಿಯಾವು ಡಿಜಿಟಲ್ ವಿತರಣಾ ಸೇವೆಗಳಿಗಾಗಿ ಡಿಜಿಟಲ್ ಮೂಲಭೂತ ಸೌಕರ್ಯದಿಂದ ಡಿಜಿಟಲ್ ಸಬಲೀಕರಣ, ಡಿಜಿಟಲ್ ಸೇರ್ಪಡೆಗೆ ಭಾರತ ತೆರೆದುಕೊಳ್ಳಲಿದೆ. ಅಂತಹ ಸಮಗ್ರವಾದ ರೀತಿಯಲ್ಲಿ ತಂತ್ರಜ್ಞಾನವನ್ನು ಬೆಳೆಸುವಂತೆ ಕೆಲವು ವರ್ಷಗಳ ಹಿಂದೆ ಯೋಜನೆ ರೂಪಿಸಲಾಗಿತ್ತು. ಕಳೆದ ಮೂರು ವರೆ ವರ್ಷಗಳಲ್ಲಿ ಸಾರ್ವಜನಿಕ ಜೀವನದ ಭಾಗವಾಗಿ ಡಿಜಿಟಲ್ ಇಂಡಿಯಾ ಬೆಳೆದಿದೆ. ಮೋದಿ ಹೇಳಿದ್ದಾರೆ.
ತಂತ್ರಜ್ಞಾನವನ್ನು ಸಾರ್ವಜನಿಕ ಪ್ರಯೋಜನಕ್ಕಾಗಿ ಉಪಯೋಗಿಸಿದರೆ, ದೇಶಕ್ಕೆ ನಿರಂತರ ಸಮೃದ್ಧಿಯನ್ನು ಮತ್ತು ಸುಸ್ಥಿರ ಭವಿಷ್ಯವನ್ನು ಒದಗಿಸಬಹುದು ಎಂದು ಮೋದಿ ಹೇಳಿದರು.