ನವದೆಹಲಿ: ಕೇಂದ್ರ ಹಣಕಾಸು ಗುಪ್ತಚರ ದಳ ಸುಮಾರು 9,500 ಬ್ಯಾಂಕೇತರ ಹಣಕಾಸು ಕಂಪೆನಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅವು ಅತಿ ಹೆಚ್ಚು ಅಪಾಯಕಾರಿ ಹಣಕಾಸು ಸಂಸ್ಥೆಗಳು ಎಂದು ಸಚಿವಾಲಯ ಹೇಳಿದೆ.
ಅಕ್ರಮ ಹಣ ವರ್ಗಾವಣೆ ಕಾಯ್ದೆ ಪ್ರಕಾರ, ಎಲ್ಲಾ ಬ್ಯಾಂಕೇತರ ಹಣಕಾಸು ಕಂಪೆನಿಗಳು ಪ್ರಧಾನ ಅಧಿಕಾರಿಯನ್ನು ಹಣಕಾಸು ಸಂಸ್ಥೆಗಳಲ್ಲಿ ನೇಮಿಸಬೇಕಾಗಿದ್ದು 10ಲಕ್ಷಕ್ಕೂ ಅಧಿಕ ಶಂಕಾಸ್ಪದ ನಗದು ವಹಿವಾಟುಗಳನ್ನು ಮಾಡುವವರಿದ್ದರೆ ಅವರ ಬಗ್ಗೆ ಹಣಕಾಸು ಗುಪ್ತಚರ ಘಟಕಗಳಿಗೆ ಮಾಹಿತಿ ನೀಡಬೇಕು ಎಂದು ಹೇಳಲಾಗಿದೆ.
ಆದರೆ ಕಳೆದ ತಿಂಗಳವರೆಗೆ ನೀಡಿರುವ ವರದಿ ಪ್ರಕಾರ ಕಂಪೆನಿಗಳು ಮಾಹಿತಿ ನೀಡಿಲ್ಲ. ಅದಾನಿ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್, ಆನಂದ್ ಕಾರ್ಪೊರೇಟ್ ಹೋಲ್ಡಿಂಗ್ ಪ್ರೈ.ಲಿ, ಅರಿಹಂತ್ ಉದ್ಯೋಗ್ ಲಿ. ಏಷಿಯನ್ ಫೈನಾನ್ಸಿಯಲ್ ಸರ್ವಿಸಸ್, ಅವೊನ್ ಮನಿ ಸೊಲ್ಯೂಷನ್ ಇಂಡಿಯಾ ಲಿಮಿಟೆಡ್, ಬಿಂದಾಲ್ ಫಿನ್ ವೆಸ್ಟ್, ಬಾಂಬೆ ಗ್ಯಾಸ್ ಕೊ ಲಿಮಿಟೆಡ್, ಸೆಲ್ಲೊ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್, ಡಿಎಲ್ಎಫ್ ಫಿನ್ವೆಸ್ಟ್ ಲಿಮಿಟೆಡ್, ಎರೊಸ್ ಮರ್ಚೆಂಟ್ಸ್(ಪ್ರೈ)ಲಿ ಮತ್ತು ಇಂಡಿಗೊ ಫಿನ್ ಕಾಪ್ ಪ್ರೈ.ಲಿಮಿಟೆಡ್ ಹಣಕಾಸು ಕಂಪೆನಿಗಳ ಪಟ್ಟಿಯಲ್ಲಿರುವ ಕೆಲವು ಕಂಪೆನಿಗಳು.
ನೋಟುಗಳ ಅನಾಣ್ಯೀಕರಣದ ನಂತರ ಹಲವು ಗ್ರಾಮೀಣ ಮತ್ತು ನಗರ ಸಹಕಾರಿ ಬ್ಯಾಂಕುಗಳು ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯದ ಕಣ್ಗಾವಲಿನಡಿ ಬಂದಿವೆ.