ವಾಣಿಜ್ಯ

ಡಿಸೆಂಬರ್ ನಲ್ಲಿ ಸಗಟು ಬೆಲೆ ಸೂಚ್ಯಂಕ ಹಣದುಬ್ಬರ ಶೇ. 3.58 ಕ್ಕೆ ಇಳಿಕೆ

Sumana Upadhyaya
ನವದೆಹಲಿ: ಸಗಟು ಬೆಲೆಗಳ ಆಧಾರದ ಮೇಲೆ ಹಣದುಬ್ಬರ ಕಡಿಮೆಯಾಗಿ ಕಳೆದ ಡಿಸೆಂಬರ್ ನಲ್ಲಿ ಶೇಕಡಾ 3.58ಕ್ಕೆ ತಲುಪಿದೆ. ಇಂಧನದ ಬೆಲೆ ಏರಿಕೆಯಾದರೂ ಕೂಡ ಆಹಾರ ಪದಾರ್ಥಗಳ ಬೆಲೆ ಇಳಿಕೆಯಾಗಿರುವುದು ಇದಕ್ಕೆ ಕಾರಣವಾಗಿದೆ.
ಸಗಟು ಬೆಲೆ ಸೂಚ್ಯಂಕ ಆಧಾರದ ಮೇಲೆ ನಡೆಸಿದ ಲೆಕ್ಕಾಚಾರ ಪ್ರಕಾರ, ನವೆಂಬರ್ ತಿಂಗಳಲ್ಲಿ ಹಣದುಬ್ಬರ ಶೇಕಡಾ 3.93 ಆದರೆ 2016 ಡಿಸೆಂಬರ್ ನಲ್ಲಿ ಶೇಕಡಾ 2.10ರಷ್ಟಾಗಿತ್ತು.
ಸರ್ಕಾರ ಇಂದು ಬಿಡುಗಡೆ ಮಾಡಿರುವ ಅಂಕಿಅಂಶ ಪ್ರಕಾರ, ನವೆಂಬರ್ ನಲ್ಲಿ ಆಹಾರ ವಸ್ತುಗಳ ಮೇಲಿನ ಹಣದುಬ್ಬರ ಶೇಕಡಾ 6.ರಿಂದ ಡಿಸೆಂಬರ್ ನಲ್ಲಿ ಶೇಕಡಾ 4.72ಕ್ಕೆ ಇಳಿಕೆಯಾಗಿದೆ.
ತರಕಾರಿ ಮೇಲಿನ ವಾರ್ಷಿಕ ಹಣದುಬ್ಬರ ಶೇಕಡಾ 59.80ಕ್ಕಿಂತ ಶೇಕಡಾ 56.46ಕ್ಕೆ ಇಳಿಕೆಯಾಗಿದೆ.ಈರುಳ್ಳಿ ಮೇಲಿನ ಹಣದುಬ್ಬರ ಶೇಕಡಾ 197.05ರಷ್ಟು ಏರಿಕೆಯಾಗಿದೆ.
ಇನ್ನು ಮೊಟ್ಟೆ, ಮಾಂಸ ಮತ್ತು ಮೀನುಗಳ ಮೇಲಿನ ಹಣದುಬ್ಬರ ಶೇಕಡಾ 1.67ರಷ್ಟು ಇಳಿಕೆಯಾಗಿದ್ದು, ಹಣ್ಣುಗಳ ಮೇಲಿನ ಹಣದುಬ್ಬರ ಶೇಕಡಾ 11.99ರಷ್ಟು ಏರಿಕೆಯಾಗಿದೆ.
ಇಂಧನ ಮತ್ತು ವಿದ್ಯುತ್ ವಲಯಗಳಲ್ಲಿ ಸಗಟು ಹಣದುಬ್ಬರ ಶೇಕಡಾ 9.16ಕ್ಕೆ ಡಿಸೆಂಬರ್ ನಲ್ಲಿ ಏರಿಕೆಯಾಗಿದ್ದು ಉತ್ಪಾದನಾ ವಸ್ತುಗಳ ಮೇಲಿನ ಹಣದುಬ್ಬರ ಶೇಕಡಾ 2.61ರಷ್ಟಾಗಿದೆ. ಚಿಲ್ಲರೆ ಹಣದುಬ್ಬರ ಕಳೆದ ಡಿಸೆಂಬರ್ ನಲ್ಲಿ ಶೇಕಡಾ 5.21ಕ್ಕೆ ಏರಿಕೆಯಾಗಿದೆ.
ಪ್ರಮುಖ ನೀತಿ ದರಗಳನ್ನು ನಿರ್ಧರಿಸುವಾಗ ಚಿಲ್ಲರೆ ಹಣದುಬ್ಬರವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪರಿಗಣಿಸುತ್ತದೆ. 
SCROLL FOR NEXT