ಆಸ್ಚ್ರೇಲಿಯಾ: ಭಾರತದ ಕ್ಯಾಬ್ ಸೇವೆಯಲ್ಲಿ ಅಗ್ರಸ್ಥಾನದಲ್ಲಿರುವ ಒಲಾ ಕಂಪನಿ, ಕೆಲವೇ ದಿನಗಳಲ್ಲಿ ಆಸ್ಟ್ರೇಲಿಯಾದಲ್ಲೂ ಕಾರ್ಯಾರಂಭ ಮಾಡಲಿದೆ. ಅಮೆರಿಕಾ ಮೂಲದ ಉಬರ್ ಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಆಸ್ಟ್ರೇಲಿಯಾದ ಸಿಡ್ನಿ, ಮೆಲ್ಬರ್ನ್ ಹಾಗೂ ಪರ್ಥ್ ನಲ್ಲಿ ಒಲಾ ಸೇವೆ ಆರಂಭಿಸಲಾಗುತ್ತಿದೆ .
ಆಸ್ಟ್ರೇಲಿಯಾದಲ್ಲಿ ಒಲಾ ಸೇವೆ ಆರಂಭಿಸಲು ಉತ್ಸುಕರಾಗಿದ್ದೇವೆ.ಹೊಸ ತಂತ್ರಜ್ಞಾನ ಆವಿಷ್ಕಾರದೊಂದಿಗೆ ಪರಿಸರಕ್ಕೆ ಒತ್ತು ನೀಡುವ ಮೂಲಕ ಒಲಾ ಸೇವೆ ಪ್ರಾರಂಭಿಸಲಾಗುತ್ತಿದೆ.ನಾಗರಿಕರಿಗೆ ಉತ್ತಮದರಲ್ಲಿ ಅತ್ಯುತ್ತಮ ಸೇವೆ ನೀಡುವುದು ತಮ್ಮ ಗುರಿಯಾಗಿದೆ ಎಂದು ಒಲಾ ಕಂಪನಿ ಸಿಇಓ ಭವೀಶ್ ಅಗರ್ ವಾಲ್ ತಿಳಿಸಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಈಗಾಗಲೇ ಉಬರ್ ಕಾರ್ಯನಿರ್ವಹಿಸುತ್ತಿದ್ದು,ಅಲ್ಲೂ ಒಲಾದಿಂದ ಪೈಪೋಟಿ ಎದುರಾಗಲಿದೆ.2012ರಿಂದಲೂ ಆಸ್ಟ್ರೇಲಿಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಉಬರ್ ಸಿಡ್ನಿ, ಮೇಲ್ಬರ್ನ್, ಪರ್ಥ್ , ಕ್ಯಾನ್ ಬೇರಾ ಸೇರಿದಂತೆ 19 ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.
2011ರಲ್ಲಿ ಸ್ಥಾಪನೆಯಾದ ಒಲಾಗೆ ಭಾರತದ 110 ನಗರಗಳಲ್ಲಿ 125 ಮಿಲಿಯನ್ ಗ್ರಾಹಕರು, 1 ಮಿಲಿಯನ್ ಗೂ ಹೆಚ್ಚು ಚಾಲಕರ ಸಹಭಾಗಿತ್ವವಿದೆ. ವಾರ್ಷಿಕವಾಗಿ ಒಂದು ಬಿಲಿಯನ್ ಗೂ ಹೆಚ್ಚು ಪ್ರಯಾಣಿಕರು ಬೆಂಗಳೂರು ಮೂಲದ ಒಲಾ ಕ್ಯಾಬ್ ಸೇವೆ ಪಡೆಯುತ್ತಿದ್ದಾರೆ.