ಕೇಂದ್ರ ಸರ್ಕಾರ ಜಿ ಎಸ್ ಟಿ ಜಾರಿಯ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದರೆ, ಇತ್ತ ಕಾಂಗ್ರೆಸ್ ಜಿಎಸ್ ಟಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವೈಫಲ್ಯಗಳ ಕುರಿತು ಟೀಕಾ ಪ್ರಹಾರ ನಡೆಸಿದೆ.
ಜಿಎಸ್ ಟಿಯಿಂದಾಗಿ ಸಾಮಾನ್ಯ ಜನರ ಮೇಲಿನ ತೆರಿಗೆ ಹೊರೆ ಹೆಚ್ಚಾಗಿದ್ದು, ಜಿಎಸ್ ಟಿ ವಿರುದ್ಧ ಜನಸಾಮಾನ್ಯರು ಅಸಮಾಧಾನಗೊಂಡಿದ್ದಾರೆ ಎಂದು ಮಾಜಿ ವಿತ್ತ ಸಚಿವ ಪಿ ಚಿದಂಬರಂ ಹೇಳಿದ್ದಾರೆ.
ಜಿಎಸ್ ಟಿ ಜಾರಿ, ಅದರ ದರಗಳೂ ಸಹ ದೋಷಪೂರಿತವಾಗಿದ್ದು ಉದ್ಯಮಿಗಳು, ವ್ಯಾಪಾರಿಗಳು, ರಫ್ತುದಾರರು, ಸಾಮಾನ್ಯ ನಾಗರಿಕರಲ್ಲಿ ಕೆಟ್ಟ ಅಭಿಪ್ರಾಯ ಮೂಡಿದೆ, ಜಿಎಸ್ ಟಿ ಜಾರಿಯಾಗಿರುವುದರಿಂದ ಸಂತಸಗೊಂಡಿರುವ ಏಕೈಕ ವರ್ಗವೆಂದರೆ ಅದು ತೆರಿಗೆ ಆಡಳಿತದ ವರ್ಗವಾಗಿದ್ದು, ಅವರಿಗೆ ಹೆಚ್ಚಿನ ಅಧಿಕಾರ ಸಿಕ್ಕಿರುವುದರಿಂದ ಸಂತಸಗೊಂಡಿದ್ದಾರೆ ಎಂದು ಚಿದಂಬರಂ ಟೀಕಾ ಪ್ರಹಾರ ಮಾಡಿದ್ದಾರೆ.