3 ವರ್ಷಗಳಲ್ಲಿ ಭಾರತಕ್ಕೆ ಬರಲಿವೆ ವಾಲ್ಮಾರ್ಟ್ ನ 20 ಕ್ಯಾಶ್ ಆ್ಯಂಡ್ ಕ್ಯಾರಿ ಮಳಿಗೆಗಳು! 
ವಾಣಿಜ್ಯ

3 ವರ್ಷಗಳಲ್ಲಿ ಭಾರತಕ್ಕೆ ಬರಲಿವೆ ವಾಲ್ಮಾರ್ಟ್ ನ 20 ಕ್ಯಾಶ್ ಆ್ಯಂಡ್ ಕ್ಯಾರಿ ಮಳಿಗೆಗಳು!

ಅಮೆರಿಕದ ವ್ಯಾಪಾರ ಕ್ಷೇತ್ರದ ದೈತ್ಯ ಸಂಸ್ಥೆ ವಾಲ್ಮಾರ್ಟ್ ಭಾರತದಲ್ಲಿ ಇನ್ನು 3 ವರ್ಷಗಳಲ್ಲಿ 20 ಸಗಟು ಕ್ಯಾಶ್ ಆ್ಯಂಡ್ ಕ್ಯಾರಿ ಮಳಿಗೆಗಳನ್ನು ಪ್ರಾರಂಭಿಸಲಿವೆ.

ಲಖನೌ: ಅಮೆರಿಕದ ವ್ಯಾಪಾರ ಕ್ಷೇತ್ರದ ದೈತ್ಯ ಸಂಸ್ಥೆ ವಾಲ್ಮಾರ್ಟ್ ಭಾರತದಲ್ಲಿ ಇನ್ನು 3 ವರ್ಷಗಳಲ್ಲಿ 20 ಸಗಟು ಕ್ಯಾಶ್ ಆ್ಯಂಡ್  ಕ್ಯಾರಿ ಮಳಿಗೆಗಳನ್ನು ಪ್ರಾರಂಭಿಸಲಿವೆ. 
ಭಾರತದಲ್ಲಿ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಇ-ಕಾಮರ್ಸ್ ಕ್ಷೇತ್ರದ ಗ್ರಾಹಕರನ್ನು ತನ್ನತ್ತ ಸೆಳೆಯುವುದಕ್ಕಾಗಿ ವಾಲ್ಮಾರ್ಟ್ ಇಂಡಿಯಾ ಈಗಾಗಲೇ ತನ್ನ ಎರಡನೇ ಪೂರೈಕಾ ಕೇಂದ್ರ( ಫುಲ್ಫಿಲ್ಮೆಂಟ್ ಸೆಂಟರ್) ವನ್ನು ಪ್ರಾರಂಭಿಸಿದ್ದು, ಆನ್ ಲೈನ್  ಬ್ಯುಸಿನೆಸ್-ಬ್ಯುಸಿನೆಸ್ (B2B) ಗ್ರಾಹಕರನ್ನು ಸೆಳೆಯುವ ಕಾರ್ಯದಲ್ಲಿ ತೊಡಗಿದೆ. 
ಭಾರತದಲ್ಲಿ 20 ಕ್ಯಾಶ್ ಆ್ಯಂಡ್  ಕ್ಯಾರಿ ಮಳಿಗೆಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ವಾಲ್ಮಾರ್ಟ್ ಇಂಡಿಯಾ ಅಧ್ಯಕ್ಷ ಹಾಗೂ ಸಿಇಒ ಕ್ರಿಷ್ ಅಯ್ಯರ್ ಈ ವರ್ಷ 2 ಮಳಿಗೆಗಳು, ಮುಂದಿನ ವರ್ಷ 8 ಮಳಿಗೆಗಳು ಹಾಗೂ ಆ ನಂತರ 10 ಮಳಿಗೆಗಳನ್ನು ಪ್ರಾರಂಭಿಸುವುದಾಗಿ ಹೇಳಿದ್ದಾರೆ. 
ಈಗಾಗಲೇ ಲಖನೌದಲ್ಲಿ ಪೂರೈಕೆ ಮಾಡುವ ಕೇಂದ್ರವನ್ನು ವಾಲ್ಮಾರ್ಟ್ ಸ್ಥಾಪಿಸಿದ್ದು, ಭಾರತದ ಇತರ ರಾಜ್ಯಗಳಲ್ಲಿಯೂ ಪೂರೈಕಾ ಕೇಂದ್ರಗಳನ್ನು ಸ್ಥಾಪಿಸಲಿವೆ ಎಂದು ಕ್ರಿಶ್ ಅಯ್ಯ್ಯರ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮೆ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್