ಸಾಂದರ್ಭಿಕ ಚಿತ್ರ 
ವಾಣಿಜ್ಯ

ಸರ್ಕಾರದಿಂದ ಹೆಚ್ಚುವರಿ 2 ಸಾವಿರ ಕೋಟಿ ಧನಸಹಾಯ ಕೋರಿದ ಏರ್ ಇಂಡಿಯಾ ಸಂಸ್ಥೆ

ಸತತ ಮೂರು ತಿಂಗಳಿನಿಂದ ನೌಕರರಿಗೆ ವೇತನ ನೀಡಿಕೆಯಲ್ಲಿ ವಿಳಂಬ ಮಾಡಿದ್ದ ಏರ್ ಇಂಡಿಯಾ ...

ಮುಂಬೈ: ಸತತ ಮೂರು ತಿಂಗಳಿನಿಂದ ನೌಕರರಿಗೆ ವೇತನ ನೀಡಿಕೆಯಲ್ಲಿ ವಿಳಂಬ ಮಾಡಿದ್ದ ಏರ್ ಇಂಡಿಯಾ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರದಿಂದ ಹೆಚ್ಚುವರಿ 2,000 ಕೋಟಿ ರೂಪಾಯಿ ಹಣ ಕೇಳಿದೆ.

ಈ ಬಗ್ಗೆ ಕಂಪೆನಿಯ ಹಿರಿಯ ಅಧಿಕಾರಿ ಹೇಳಿಕೆ ನೀಡಿದ್ದು, ಮುಂದಿನ ತಿಂಗಳಿನಿಂದಲೇ ಹಣವನ್ನು ಬಿಡುಗಡೆ ಮಾಡುವಂತೆ ಕೋರಿದೆ. ಪ್ರಸಕ್ತ ಮುಂಗಾರು ಋತುವಿನಲ್ಲಿ ಹಣವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದೆ.

ಯುಪಿಎ ಸರ್ಕಾರ 2012ರಲ್ಲಿ 10 ವರ್ಷಗಳಿಗೆ ಘೋಷಣೆ ಮಾಡಿದ್ದ 30,231 ಕೋಟಿ ರೂಪಾಯಿ ಬೇಲ್ ಔಟ್ ಪ್ಯಾಕೇಜ್ ನಲ್ಲಿ 26,000 ಕೋಟಿ ರೂಪಾಯಿಗಳನ್ನು ಈಗಾಗಲೇ ಪಡೆದುಕೊಂಡಿದೆ.

ಸದ್ಯದ ಬಿಕ್ಕಟ್ಟಿನ ಸ್ಥಿತಿಯನ್ನು ನಿಭಾಯಿಸಲು ಹೆಚ್ಚುವರಿ 2,000 ಕೋಟಿ ರೂಪಾಯಿಗಳನ್ನು ನಾವು ಸರ್ಕಾರದಲ್ಲಿ ಕೇಳುತ್ತಿದ್ದೇವೆ ಎಂದು ವಿಮಾನಯಾನ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2013-2014ರವರೆಗೆ ಏರ್ ಇಂಡಿಯಾ ವರ್ಷಕ್ಕೆ ಸರಾಸರಿ 3 ಸಾವಿರದಿಂದ 4 ಸಾವಿರ ಕೋಟಿ ರೂಪಾಯಿಗಳನ್ನು ಸರ್ಕಾರದಿಂದ ಪಡೆಯುತ್ತಿತ್ತು. ಆ ಬಳಿಕ ಸರ್ಕಾರದಿಂದ ಸಿಗುವ ಮೊತ್ತ ಕಡಿಮೆಯಾಗತೊಡಗಿತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಖಾಸಗೀಕರಣ ಯೋಜನೆಯಿಂದಾಗಿ ಸರ್ಕಾರದಿಂದ ಏರ್ ಇಂಡಿಯಾಗೆ ಕೇವಲ 650 ಕೋಟಿ ರೂಪಾಯಿಗಳು ಬಂದಿತ್ತು. ಖಾಸಗೀಕರಣ ಯೋಜನೆಯಿಂದ ಬಿಡ್ ಸಲ್ಲಿಸಿದ್ದ ಸರ್ಕಾರಕ್ಕೆ ಸಿಕ್ಕಿದ್ದು ಕೇವಲ ಶೇಕಡಾ 76ರಷ್ಟು ಪಾಲು ಮಾತ್ರ,

ನಗದು ಕೊರತೆಯನ್ನು ಸರಿದೂಗಿಸಲು ಏರ್ ಇಂಡಿಯಾ ಕಳೆದ ಸೆಪ್ಟೆಂಬರ್ ನಿಂದ ಜನವರಿ ನಡುವೆ ವಿವಿಧ ಬ್ಯಾಂಕುಗಳಿಂದ 6,250 ಕೋಟಿ ರೂಪಾಯಿ ಹಣವನ್ನು ಸಾಲ ಪಡೆದುಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ