ಬೆಂಗಳೂರು: ಜಾಗತಿಕ ಮಟ್ಟದ ಸಾಫ್ಟ್ ವೇರ್ ಸಂಸ್ಥೆ ಇನ್ಫೋಸಿಸ್ ಅಮೆರಿಕದಲ್ಲಿ ಶೀಘ್ರದಲ್ಲೇ ಟೆಕ್ ಹಬ್ ನ್ನು ಪ್ರಾರಂಭಿಸಲಿದ್ದು ಸ್ಥಳೀಯ 1 ಸಾವಿರ ಅಮೆರಿಕನ್ನರಿಗೆ ಉದ್ಯೋಗ ಸಿಗುವ ಸಾಧ್ಯತೆ ಇದೆ.
ಕನೆಕ್ಟಿಕಟ್ ನಲ್ಲಿ ಇನ್ಫೋಸಿಸ್ ತನ್ನ ಟೆಕ್ ಹಬ್ ನ್ನು ಪ್ರಾರಂಭಿಸಲಿದ್ದು 2022 ರ ವೇಳೇಗೆ 1000 ಅಮೆರಿಕನ್ನರಿಗೆ ಉದ್ಯೋಗ ನೀಡುವ ಗುರಿ ಹೊಂದಿದೆ. ಈ ಬಗ್ಗೆ ಸಂಸ್ಥೆ ಹೇಳಿಕೆ ಬಿಡುಗಡೆ ಮಾಡಿದ್ದು, ಪ್ರಾರಂಭಗೊಳ್ಳಲಿರುವ ಟೆಕ್ ಹಬ್ ಇನ್ಸ್ಯೂರೆನ್ಸ್, ಹೆಲ್ತ್ ಕೇರ್ ಹಾಗೂ ಉತ್ಪಾದನಾ ವಲಯಗಳ ಮೇಲೆ ಹೆಚ್ಚು ಕೇಂದ್ರೀಕೃತವಾಗಿರಲಿದೆ ಎಂದು ಸಂಸ್ಥೆ ಹೇಳಿದೆ.