ಏರ್ ಇಂಡಿಯಾ ವಿಮಾನ 
ವಾಣಿಜ್ಯ

ಶೀಘ್ರದಲ್ಲಿಯೇ ನವದೆಹಲಿ -ಇಸ್ರೇಲ್ ನ ಟೆಲ್ ಅವಿವ್ ನಡುವೆ ನೇರ ವಿಮಾನ ಸೇವೆ ಆರಂಭ

ಮಾ.22 ರಿಂದ ಇಸ್ರೇಲ್ ನ ತೆಲ್ ಅವಿನ್ ಹಾಗೂ ನವದೆಹಲಿ ನಡುವೆ ನೇರ ವಿಮಾನ ಹಾರಾಟವನ್ನು ಆರಂಭಿಸಲಾಗುವುದು ಎಂದು ಏರ್ ಇಂಡಿಯಾ ಸಂಸ್ಥೆ ಇಂದು ತಿಳಿಸಿದೆ.

ನವದೆಹಲಿ : ಮಾ.22 ರಿಂದ  ಇಸ್ರೇಲ್ ನ ಟೆಲ್ ಅವಿವ್  ಹಾಗೂ ನವದೆಹಲಿ ನಡುವೆ ನೇರ ವಿಮಾನ ಹಾರಾಟವನ್ನು  ಆರಂಭಿಸಲಾಗುವುದು  ಎಂದು ಏರ್ ಇಂಡಿಯಾ ಸಂಸ್ಥೆ ಇಂದು ತಿಳಿಸಿದೆ.

256 ಆಸನದ ಬೋಯಿಂಗ್ 787 ಡ್ರೀಮ್ ಲೈನರ್ ವಿಮಾನ ಗುರುವಾರದಿಂದ ಕಾರ್ಯಾಚರಣೆ ಆರಂಭಿಸಲಿದ್ದು, ವಾರದಲ್ಲಿ ಮೂರು ದಿನ ಮಂಗಳವಾರ, ಗುರುವಾರ ಹಾಗೂ ಭಾನುವಾರದಂದು ಸೇವೆ ಒದಗಿಸಲಾಗುತ್ತಿದೆ.

 ಮಾರ್ಚ್ 22 ರಂದು ಎಐ139 ವಿಮಾನ ದೆಹಲಿಯಲ್ಲಿ ಸಂಜೆ 6 ಗಂಟೆ ಹೊರಡಲಿದ್ದು, 9-45ಕ್ಕೆ ಟೆಲ್ ಅವಿವ್   ತಲುಪಲಿದೆ. ಮತ್ತೆ  ಟೆಲ್ ಅವಿವ್  ನಿಂದ ಹೊರಟು ರಾತ್ರಿ 11.15ಕ್ಕೆ  ಹೊರಟು  ಬೆಳಿಗ್ಗೆ 10 ಗಂಟೆಗೆ ದೆಹಲಿಗೆ ವಾಪಾಸ್ಸಾಗಲಿದೆ.

 ಆದಾಗ್ಯೂ, ಏಪ್ರಿಲ್ 1 ರಂದು ಸಂಜೆ 4-30ಕ್ಕೆ ದೆಹಲಿಯಿಂದ ನಿರ್ಗಮಿಸುವ ಎಐ 139 ವಿಮಾನ 9-45 ಕ್ಕೆ ಟೆಲ್ ಅವಿವ್   ತಲುಪಲಿದೆ. ರಾತ್ರಿ 11-15ಕ್ಕೆ ಟೆಲ್ ಅವಿವ್  ನಿಂದ ನಿರ್ಗಮಿಸಲಿದ್ದು, ಮಾರನೇ ದಿನ ಬೆಳಿಗ್ಗೆ 9 ಗಂಟೆಗೆ ದೆಹಲಿಗೆ ತಲುಪಲಿದೆ ಎಂದು ಮಾಹಿತಿ ನೀಡಲಾಗಿದೆ.

ಇಸ್ರೇಲ್ ಹಾಗೂ ಭಾರತ ನಡುವಿನ ಪ್ರವಾಸೋಧ್ಯಮ ಅಭಿವೃದ್ಧಿ  ದೃಷ್ಟಿಯಿಂದ ವಿಮಾನ ಹಾರಾಟ ಸೇವೆ ಆರಂಭಿಸಲಾಗುತ್ತಿದ್ದು, ದಕ್ಷಿಣ ಏಷ್ಯಾ ಹಾಗೂ ಆಸ್ಟ್ರೇಲಿಯಾದ ಪ್ರಯಾಣಿಕರನ್ನು ಸೆಳೆಯಲಾಗುತ್ತಿದೆ.

ಮುಂದಿನ ದಿನಗಳಲ್ಲಿ ಮುಂಬೈ ಹಾಗೂ ಟೆಲ್ ಅವಿವ್   ನಡುವೆ ನೇರ ವಿಮಾನ ಸೌಲಭ್ಯ ಒದಗಿಸಲಾಗುವುದು ಎಂದು ಏರ್ ಇಂಡಿಯಾ ಸಂಸ್ಥೆ ತಿಳಿಸಿದೆ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು

ಹೆದ್ದಾರಿ ದಾಟುತ್ತಿದ್ದ ಕುರಿ-ಮೇಕೆಗಳ ಮೇಲೆ ಹರಿದ ಟ್ರಕ್; 23 ಕುರಿ, 2 ಮೇಕೆ ಸಾವು, ಭೀಕರ ವಿಡಿಯೋ ಸಿಸಿಟಿವಿಯಲ್ಲಿ ಸೆರೆ!

ಚಿಂತಾಮಣಿಯ Dictator, ನಿನ್ನ ವಿರುದ್ಧ ಸಮರ ನಿರಂತರ: ಎಂಸಿ ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್ ಮತ್ತೆ ಕಿಡಿ

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!