ಸೋನಿ ಇಂಡಿಯಾದ ಮೊದಲ ಭಾರತೀಯ ಎಂಡಿಯಾಗಿ ಸುನಿಲ್ ನಯ್ಯರ್ ನೇಮಕ
ಸೋನಿ ಇಂಡಿಯಾ ಭಾರತೀಯ ಮೂಲದ ಸುನಿಲ್ ನಯ್ಯರ್ ಅವರನ್ನು ನೂತನ ವ್ಯವಸ್ಥಾಪಕ ...
ನವದೆಹಲಿ: ಸೋನಿ ಇಂಡಿಯಾ ಭಾರತೀಯ ಮೂಲದ ಸುನಿಲ್ ನಯ್ಯರ್ ಅವರನ್ನು ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಿಸಿದೆ. ಕಂಪೆನಿಗೆ ನೇಮಕಗೊಂಡ ಮೊದಲ ಭಾರತೀಯ ಎಂ.ಡಿ ಸುನಿಲ್ ನಯ್ಯರ್ ಆಗಿದ್ದಾರೆ.
ಮುಂದಿನ ತಿಂಗಳು 1ರಿಂದ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಸೋನಿ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅತ್ಯಂತ ಪ್ರಮುಖ ಎಲೆಕ್ಟ್ರಾನಿಕ್ಸ್ ಬ್ರಾಂಡ್ ಆಗಿರುವ ಸೋನಿ ಇಂಡಿಯಾವನ್ನು ಭಾರತದಲ್ಲಿ ಹೆಚ್ಚು ಪ್ರಚಾರ ಮಾಡುವುದು, ವಹಿವಾಟು ವಿಸ್ತರಿಸುವುದು ಮುಖ್ಯವಾಗಿದೆ ಎಂದು ನಯ್ಯರ್ ತಿಳಿಸಿದ್ದಾರೆ.
ನಯ್ಯರ್ ಅವರು ಕೆನಿಚಿರೋ ಹೈಬಿ ಅವರಿಂದ ಅಧಿಕಾರ ವಹಿಸಿಕೊಂಡಿದ್ದು ಅವರು ಸೋನಿ ಬ್ರೆಜಿಲ್ ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಸೋನಿ ಇಂಡಿಯಾದಲ್ಲಿ ನಯ್ಯರ್ ಸೇಲ್ಸ್ ಮುಖ್ಯಸ್ಥರಾಗಿ ಏಪ್ರಿಲ್ 2006ರಿಂದ ಏಪ್ರಿಲ್ 2015ರವರೆಗೆ ಅಧಿಕಾರ ವಹಿಸಿಕೊಂಡಿದ್ದರು. ಅಲ್ಲಿಂದ ನಂತರ 2018ರ ಈ ಮಾರ್ಚ್ ವರೆಗೆ ಸೋನಿ ನಾರ್ತ್ ಅಮೆರಿಕಾದ ರಿಟೈಲ್ ಎಕ್ಸ್ ಪಿಯರೆನ್ಸ್ ನ ಮುಖ್ಯಸ್ಥರಾಗಿದ್ದಾರೆ.