ಟ್ವಿಟರ್ ನಲ್ಲಿ ಕ್ರಿಪ್ಟೋಕರೆನ್ಸಿ ಜಾಹಿರಾತಿಗೆ ನಿರ್ಬಂಧ ಸಾಧ್ಯತೆ: ವರದಿ
ಟ್ವಿಟರ್ ನಲ್ಲಿ ಕ್ರಿಪ್ಟೋಕರೆನ್ಸಿ ಜಾಹಿರಾತು ನಿಷೇಧಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಸ್ಯಾನ್ ಫ್ರಾನ್ಸಿಸ್ಕೊ: ಟ್ವಿಟರ್ ನಲ್ಲಿ ಕ್ರಿಪ್ಟೋಕರೆನ್ಸಿ ಜಾಹಿರಾತು ನಿಷೇಧಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಸ್ಕೈ ನ್ಯೂಸ್ ವರದಿಯ ಪ್ರಕಾರ ಟ್ವಿಟರ್ ನ ಹೊಸ ನೀತಿ ಇನ್ನೆರಡು ವಾರಗಳಲ್ಲಿ ಜಾರಿಗೆ ಬರಲಿದ್ದು ಹೊಸ ನೀತಿಯಲ್ಲಿ ಕ್ರಿಪ್ಟೋ ಕರೆನ್ಸಿ ನಿಷೇಧಗೊಳ್ಳುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂಬ ನಿರೀಕ್ಷೆ ಇದೆ.
ಫೇಸ್ ಬುಕ್ ನಲ್ಲಿ ಈಗಾಗಲೇ ಕ್ರಿಪ್ಟೋ ಕರೆನ್ಸಿ ಕುರಿತ ಜಾಹಿರಾತುಗಳಿಗೆ ಈಗಾಗಲೇ ನಿರ್ಬಂಧ ವಿಧಿಸಲಾಗಿದ್ದು, ಇನ್ನು ಸರ್ಚ್ ಇಂಜಿನ್ ಗೂಗಲ್ ಸಹ ಕ್ರಿಪ್ಟೋ ಕರೆನ್ಸಿ ಹಾಗೂ ಊಹಾತ್ಮಕ ಆರ್ಥಿಕ ಉತ್ಪನ್ನಗಳ ಜಾಹಿರಾತಿಗೆ ನಿರ್ಬಂಧ ವಿಧಿಸಿದ್ದು ಜೂನ್ ನಿಂದ ಜಾಹಿರಾತು ನಿರ್ಬಂಧ ಜಾರಿಗೆ ಬರಲಿದೆ.