ಪಂಜಾಬ್ ನ್ಯಾಷನಲ್ ಬ್ಯಾಂಕ್ 
ವಾಣಿಜ್ಯ

2011ರಿಂದ ಪಿಎನ್ ಬಿ 41,170 ಎಲ್ಒಯುಗಳನ್ನು ಹೊರಡಿಸಿದೆ: ಅರುಣ್ ಜೇಟ್ಲಿ

ಪಂಜಾಬ್ ನ್ಯಾಷನಲ್ ಬ್ಯಾಂಕ್ 2011ರಿಂದ 41,178 ಸಾಲ ಒಪ್ಪಂದ ಪತ್ರಗಳನ್ನು(ಎಲ್ಒಯು) ನೀಡಿದೆ...

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ 2011ರಿಂದ 41,178 ಸಾಲ ಒಪ್ಪಂದ ಪತ್ರಗಳನ್ನು(ಎಲ್ಒಯು) ನೀಡಿದೆ.

ಅಂತರರಾಷ್ಟ್ರೀಯ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ, ಲೆಟರ್ ಆಫ್ ಅಂಡರ್ ಟೇಕಿಂಗ್ (LOU) ಬ್ಯಾಂಕ್ ಖಾತರಿಯ ಒಂದು ನಿಬಂಧನೆಯಾಗಿದೆ, ಇದರ ಅಡಿಯಲ್ಲಿ ಒಂದು ಬ್ಯಾಂಕ್ ತನ್ನ ಗ್ರಾಹಕರನ್ನು ಅಲ್ಪಾವಧಿಯ ಸಾಲ ರೂಪದಲ್ಲಿ ಮತ್ತೊಂದು ಭಾರತೀಯ ಬ್ಯಾಂಕಿನ ವಿದೇಶಿ ಶಾಖೆಯಿಂದ ಹಣವನ್ನು ಸಂಗ್ರಹಿಸಲು ಅವಕಾಶ ನೀಡುತ್ತದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ 7,672 ಎಲ್ಒಯುಗಳನ್ನು 90 ದಿನಗಳ ಅವಧಿಗೆ, 20,078 ಎಲ್ಒಯುಗಳನ್ನು 180 ದಿನಗಳ ಅವಧಿಗೆ ಮತ್ತು 11,224 ಎಲ್ಒಯುಗಳನ್ನು 365 ದಿನಗಳ ಅವಧಿಗೆ ಹೊರಡಿಸಿದೆ. ಮತ್ತು 2,204 ಎಲ್ಒಯುಗಳನ್ನು ಒಂದು ವರ್ಷಕ್ಕಿಂತ ಹೆಚ್ಚು ಅವಧಿಗೆ ಹೊರಡಿಸಲಾಗಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ರಾಜ್ಯಸಭೆಗೆ ಮಾಹಿತಿ ನೀಡಿದರು.

ಅಲ್ಲದೆ ಬೇರೆ ಬ್ಯಾಂಕುಗಳ ವಿದೇಶಿ ಶಾಖೆಗಳಿಂದ ಪ್ರತಿ ಎಲ್ಒಯು ವಿರುದ್ಧ ಹಣ ಹಿಂತೆಗೆದುಕೊಂಡ  ವಿವರಗಳು ಸದ್ಯ ಸಿಗುತ್ತಿಲ್ಲವಾದ್ದರಿಂದ ತನಿಖೆಯ ಹಂತದಲ್ಲಿದೆ ಎಂದು ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿದರು.

ಈ ಲಿಖಿತ ಉತ್ತರವನ್ನು ಅವರು ಮಾರ್ಚ್ 20ರಂದು ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT