ವಾಣಿಜ್ಯ

ಮಾರ್ಚ್ 28 ರಂದು ಬೆಂಗಳೂರಿನಲ್ಲಿ ಮೈಕ್ರೋಸಾಪ್ಟ್ ವಾರ್ಷಿಕ ಶೃಂಗಸಭೆ

Nagaraja AB

ಬೆಂಗಳೂರು :  ಐಟಿ ಕ್ಷೇತ್ರದ ದಿಗ್ಗಜ ಮೈಕ್ರೋಸಾಪ್ಟ್  ಸಂಸ್ಥೆಯ ವಾರ್ಷಿಕ ಶೃಂಗಸಭೆ ಇದೇ 28 ರಂದು ಬೆಂಗಳೂರಿನಲ್ಲಿ ನಡೆಯಲಿದೆ.

ನಾನಾ ವಲಯದ ಕೃತಕ ಬುದ್ದಿವಂತಿಕೆಗಳ  ಅನುಕೂಲತೆಗಳು  ಹಾಗೂ ಅವುಗಳನ್ನು ಹೇಗೆ ಮಾನವ ಜಾಣ್ಣೆಯಾಗಿ ಬಳಸಿಕೊಳ್ಳಬಹುದು ಎಂಬ ಬಗ್ಗೆ ಚರ್ಚೆ ನಡೆಯಲಿದೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ದೇಶದಲ್ಲಿ ನಡೆಯುತ್ತಿರುವ ಮೊದಲ ಶೃಂಗಸಭೆ ಇದಾಗಿದ್ದು, ಆರೋಗ್ಯ, ಆಟೋ , ಐಟಿ , ಐಟಿಯೇತರ ಸೇವೆಗಳು ಸೇರಿದಂತೆ ವಿವಿಧ ಉದ್ಯಮದ ಪ್ರತಿನಿಧಿಗಳು ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಜಾಗತಿಕ ಹಾಗೂ ದೇಶಿಯ ವಿಭಾಗೀಯ ಕಾರ್ಯನಿರ್ವಾಹಕ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಭಾಷಣ ಮಾಡಲಿದ್ದಾರೆ. ಗ್ರಾಹಕರು ಕೂಡಾ ಮಾತನಾಡಲಿದ್ದಾರೆ. ವಿನ್ಯಾಸಕ್ಕೆ ಸಂಬಂಧ ಕಾರ್ಯಗಾರವನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.

SCROLL FOR NEXT