ನವದೆಹಲಿ: ನವೆಂಬರ್ 19ರಂದು ನಡೆಯುವ ಕೇಂದ್ರೀಯ ಬ್ಯಾಂಕ್ ನ ನಿರ್ದೇಶಕ ಮಂಡಳಿ ಸಭೆಗೂ ಮುನ್ನವೇ ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ) ತಮ್ಮ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಲು ನಿರ್ಧರಿಸಿವೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರಿ ಸ್ವಾಮ್ಯದ ನಷ್ಟಪೀಡಿತ 11 ಬ್ಯಾಂಕ್ ಗಳ ವಿರುದ್ಧ ವಿಧಿಸಿರುವ ನಿರ್ಬಂಧಿತ ಕಠಿಣ ಕ್ರಮಗಳನ್ನು ಮತ್ತು ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯಕ್ಕೆ(ಎಂಎಸ್ ಎಂಇ) ಸಾಲ ನೀಡಿಕೆಯ ನಿಯಮಗಳನ್ನು ಸಡಿಲಗೊಳಿಸಲು ಆರ್ ಬಿಐ ಉದ್ದೇಶಿಸಿದೆ ಎಂದು ಮೂಲಗಳು ತಿಳಿಸಿವೆ.
ನೋಟ್ ಬ್ಯಾನ್ ಮಾಡಿದ ನಂತರ ದೇಶದ ಆರ್ಥಿಕತೆಯಲ್ಲಿ ಮಹತ್ವದ ಪಾತ್ ನಿರ್ವಹಿಸುತ್ತಿರುವ ಎಂಎಸ್ಎಂಇ ವಲವು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಎಂಎಸ್ಎಂಇಗಳಿಗೆ ಸಾಲ ನೀಡಿಕೆಯನ್ನು ಸರಳಗೊಳಿಸಲು ಮತ್ತು ನಗದು ಬಿಕ್ಕಟ್ಟು ಎದುರಿಸುತ್ತಿರುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ವಿಶೇಷ ನಗದು ಹಂಚಿಕೆ ಮಾಡಲು ಆರ್ ಬಿಐ ಸಮ್ಮತಿಸಿದೆ ಎನ್ನಲಾಗಿದೆ.
ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಹಣಕಾಸು ಸಚಿವಾಲಯ, ಆರ್ ಬಿಐ ಹಾಗೂ ಪ್ರಧಾನಿ ಕಚೇರಿ ನಿರಾಕರಿಸಿದೆ.
ಸುಲಭ ಸಾಲಕ್ಕಾಗಿ ಒತ್ತಾಯಿಸುತ್ತಿರುವ ಕೇಂದ್ರ ಸರ್ಕಾರ ಇತ್ತೀಚಿಗೆ ಸಾರ್ವಜನಿಕ ಹಿತರಕ್ಷಣೆಯ ಕಾರಣ ಮುಂದಿಟ್ಟುಕೊಂಡು, ಆರ್ಬಿಐಗೆ ಪತ್ರಮುಖೇನ ನಿರ್ದೇಶನಗಳನ್ನು ನೀಡಲೆಂದು ಆರ್ಬಿಐ ಕಾಯ್ದೆಯ ಪರಿಚ್ಛೇದ 7ನ್ನು ಅಸ್ತ್ರವಾಗಿ ಬಳಸಿಕೊಂಡಿತು. ಇದು ಆರ್ ಬಿಐ-ಸರ್ಕಾರದ ನಡುವಿನ ತಿಕ್ಕಾಟ ತಾರಕಕ್ಕೇರಲು ಕಾರಣವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics