ವಾಣಿಜ್ಯ

ಫಿಕ್ಸೆಡ್ ಡೆಪಾಸಿಟ್ ಗಳ ಮೇಲಿನ ಬಡ್ಡಿ ದರ ಏರಿಸಿದ ಎಸ್ ಬಿಐ: ವಿವರ ಹೀಗಿದೆ

Srinivas Rao BV
ನವದೆಹಲಿ: ದೇಶದ ಅತಿ ದೊಡ್ಡ ಬ್ಯಾಂಕ್ ಎಸ್ ಬಿಐ ಫಿಕ್ಸೆಡ್ ಡೆಪಾಸಿಟ್ ಗಳ ಮೇಲಿನ ಬಡ್ಡಿ ದರವನ್ನು ಏರಿಕೆ ಮಾಡಿದೆ. 
ನ.28 ರಂದಿಂದ ದರ ಏರಿಕೆ ಅನ್ವಯವಾಗಲಿದ್ದು, ಆಯ್ದೆ ಮೆಚುರಿಟಿ ಅವಧಿಗಳಿಗೆ ಮಾತ್ರ ಬಡ್ಡಿ ದರ ಏರಿಕೆ ಮಾಡಲಾಗಿದೆ ಎಂದು ತಿಳಿಸಿದೆ.  1 ಕೋಟಿಗಿಂತಲೂ ಕಡಿಮೆ ಇರುವ ಮೊತ್ತದ ಎಫ್ ಡಿ ಬಡ್ಡಿ ದರ ಏರಿಕೆಯಾಗಲಿದ್ದು, 1-2 ವರ್ಷಗಳ ಅವಧಿಯ ಎಫ್ ಡಿಗೆ ಶೇ.6.8 ರಷ್ಟು ಬಡ್ಡಿ ಬರಲಿದೆ.  ಇದಕ್ಕಿಂತಲೂ ಮುನ್ನ ಶೇ.6.7 ರಷ್ಟು ಬಡ್ಡಿ ದರ ನಿಗದಿಪಡಿಸಲಾಗಿತ್ತು. 
ಹಿರಿಯ ನಾಗರಿಕರಿಗೆ 1-2 ವರ್ಷದ ಅವಧಿಗೆ ಶೇ.7.2 ರಷ್ಟು ಸಿಗುತ್ತಿದ್ದ ಬಡ್ಡಿಯನ್ನು ಈಗ ಶೇ.7.30 ಕ್ಕೆ ಏರಿಕೆ ಮಾಡಲಾಗಿದೆ. ಇನ್ನು 2-3 ವರ್ಷದ ಅವಧಿಯ ಎಫ್ ಡಿಗೂ ಬಡ್ಡಿ ದರವನ್ನು  ಏರಿಕೆ ಮಾಡಿರುವ ಎಸ್ ಬಿಐ, ತನ್ನದೇ ಸಿಬ್ಬಂದಿಗಳು ಹಾಗೂ ಪಿಂಚಣಿದಾರರಿಗೆ ನೀಡಲಾಗುವ ಎಫ್ ಡಿ ಬಡ್ಡಿ ದರವನ್ನು ಸಾಮಾನ್ಯ ಬಡ್ಡಿ ದರಕ್ಕಿಂತ ಶೇ.1 ರಷ್ಟು ಏರಿಕೆ ಮಾಡಿದೆ. 
ಪ್ರಸ್ತಾವಿತ ಬಡ್ಡಿ ದರ ಹೊಸದಾಗಿ ಠೇವಣಿ ಇಡುವವರಿಗೆ ಹಾಗೂ ಎಫ್ ಡಿ ನವೀಕರಣ ಮಾಡುವವರಿಗೆ ಅನ್ವಯವಾಗಲಿದೆ. 
SCROLL FOR NEXT