ನವದೆಹಲಿ: ತೈಲ ದರ ಏರಿಕೆ ಪರ್ವ ಮತ್ತೆ ಮುಂದುವರೆದಿದ್ದು, ವಾಣಿಜ್ಯ ನಗರಿ ಮುಂಬೈಯಲ್ಲಿ ಮಂಗಳವಾರ ಪೆಟ್ರೋಲ್ ಬೆಲೆ ರೂ.91.20ಕ್ಕೆ ಏರಿಕೆಯಾಗಿದೆ. ಇದೇ ವೇಳೆ ಡೀಸೆಲ್ ಬೆಲೆ ರೂ.79.89ಕ್ಕೆ ತಲುಪಿದೆ.
ಮಂಗಳವಾರ ಪೆಟ್ರೋಲ್ ಮತ್ತು ಡೀಸೆಲ್ ದರ ಕ್ರಮವಾಗಿ ಲೀಟರ್'ಗೆ 0.12 ಪೈಸೆ ಮತ್ತು 016 ಪೈಸೆ ಏರಿಕೆಯಾಗಿದೆ.
ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ಬೆಲೆ ರೂ.83.85 ಮತ್ತು ಡೀಸೆಲ್ ಬೆಲೆ ರೂ.75.25 ಆಗಿದೆ.