ಗೃಹ ಸಾಲ ಪಡೆಯುವುದರಿಂದಲೂ ಇದೆ ಕೆಲವು ಲಾಭ, ಅವುಗಳನ್ನು ಪಡೆಯುವುದು ಹೇಗೆ? 
ವಾಣಿಜ್ಯ

ಗೃಹ ಸಾಲದಿಂದ ಬಹಳಷ್ಟು ಲಾಭಗಳನ್ನು ಪಡೆಯುವುದು ಹೇಗೆ?

ಗೃಹ ಖರೀದಿ, ನಿರ್ಮಾಣ ಪ್ರತಿಯೊಬ್ಬರ ಜೀವನದ ಯಶಸ್ಸಿನ ಮೈಲಿಗಲ್ಲು. ಬಹುತೇಕ ಜನರು ಗೃಹ ಖರೀದಿ ಅಥವಾ ನಿರ್ಮಾಣಕ್ಕಾಗಿ ಗೃಹ ಸಾಲ ಪಡೆಯುತ್ತಾರೆ. ಕೆಲವೊಮ್ಮೆ ಉದ್ಯಮಿಗಳು, ಎನ್ ಆರ್ ಐಗಳೂ ಸಹ ಇದಕ್ಕೆ ಹೊರತಾಗಿರುವುದಿಲ್ಲ.

ಗೃಹ ಖರೀದಿ, ನಿರ್ಮಾಣ ಪ್ರತಿಯೊಬ್ಬರ ಜೀವನದ ಯಶಸ್ಸಿನ ಮೈಲಿಗಲ್ಲು. ಬಹುತೇಕ ಜನರು ಗೃಹ ಖರೀದಿ ಅಥವಾ ನಿರ್ಮಾಣಕ್ಕಾಗಿ ಗೃಹ ಸಾಲ ಪಡೆಯುತ್ತಾರೆ. ಕೆಲವೊಮ್ಮೆ ಉದ್ಯಮಿಗಳು, ಎನ್ ಆರ್ ಐಗಳೂ ಸಹ ಇದಕ್ಕೆ ಹೊರತಾಗಿರುವುದಿಲ್ಲ. 
ಗೃಹ ನಿರ್ಮಾಣಕ್ಕಾಗಿ ಸಾಲ ಮಾಡುವುದರಿಂದ ಯಾವುದೇ ವ್ಯಕ್ತಿಯ ಹಣಕಾಸು ಯೋಜನೆಗಳ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ಈಗ ಗಮನಿಸೋಣ. ಗೃಹ ನಿರ್ಮಾಣ, ಖರೀದಿಗಾಗಿ ಸಾಲ ಮಾಡಿದರೆ ಸಿಗುವ ಪ್ರಮುಖ ಲಾಭವೆಂದರೆ ಅದು ತೆರಿಗೆ ಲಾಭ. ಗೃಹ ಸಾಲದಿಂದ ಎರಡು ರೀತಿಯ ಲಾಭಗಳಿವೆ. ನೀವು ಮನೆ ಖರೀದಿಸಲು ಒಂದಷ್ಟು ಸಾಲ ತೆಗೆದುಕೊಂಡಿರುತ್ತೀರಾ ಎಂದುಕೊಳ್ಳಿ, ಆ ಸಾಲದ ಮೂಲ ಮೊತ್ತಕ್ಕೆ ಒಂದಷ್ಟು ಬಡ್ಡಿ ಸೇರಿಸಿ ಇಎಂಐ ನ್ನೂ ಕಟ್ಟುತ್ತೀರ. ಹೀಗೆ ಬಡ್ಡಿ ಕಟ್ಟುವುದರ ಮೇಲೆ ಆದಾಯ ತೆರಿಗೆ ನಿಯಮಗಳ ಸೆಕ್ಷನ್ 80 ಸಿ ಪ್ರಕಾರ ನೀವು ಹೆಚ್ಚು ಕಡಿಮೆ 1.5 ಲಕ್ಷದ ಮಿತಿ ವರೆಗೆ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ. ಮತ್ತೊಂದು ಲಾಭವೆಂದರೆ ಮನೆ ಆಸ್ತಿಯ ಆದಾಯಕ್ಕೆ ಸಂಬಂಧಿಸಿದಂತೆ ಮತ್ತೆ ಇಎಂಐ ನಲ್ಲಿ ಬಡ್ಡಿಯ ಭಾಗದಿಂದ ಗರಿಷ್ಠ 2 ಲಕ್ಷ ರೂಪಾಯಿ ವರೆಗಿನ ಮೊತ್ತಕ್ಕೆ ನೀವು ಆದಾಯ ತೆರಿಗೆಯಿಂದ ವಿನಾಯಿತಿ ಪಡೆಯಬಹುದಾಗಿದೆ. ಈ ಹಿನ್ನೆಲೆಯಲ್ಲಿ ಗೃಹ ಸಾಲ ಪಡೆಯುವುದರಿಂದ ಆದಾಯಕ್ಕೆ ಸಂಬಂಧಿಸಿದಂತೆ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ ಎಂದು ಕ್ಲಿಯರ್ ಟ್ಯಾಕ್ಸ್ ನ ಸಿಇಒ ಅರ್ಚಿತ್ ಗುಪ್ತಾ ಹೇಳಿದ್ದಾರೆ. 
ಉದ್ಯೋಗದಲ್ಲಿರುವ ವ್ಯಕ್ತಿಯ ವೇತನದಿಂದ ಇಪಿಎಫ್ ಕಡಿತಗೊಳ್ಳುತ್ತಿದ್ದು, ಆ ವ್ಯಕ್ತಿ ಗೃಹ ಸಾಲವನ್ನೂ ಪಡೆದಿದ್ದರೆ, ಸೆಕ್ಷನ್ 80 ಸಿ ಅಡಿಯಲ್ಲಿ ಡಿಡಕ್ಟ್ ಆಗುವ ಬಹುತೇಕ ಮೊತ್ತ, ಇಪಿಎಫ್ ಖಾತೆಯ ಮೂಲಕ ಆಗಿರುತ್ತದೆ. ಆದ್ದರಿಂದ ಗೃಹ ಸಾಲ ಪಡೆದು, 80 ಸಿ ಅಡಿಯಲ್ಲಿ ಬರುವ ಮೊತ್ತದ ಭಾಗದಲ್ಲಿ ತೆರಿಗೆ ಉಳಿತಾಯ ಮಾಡಲು ಹಲವು ಆರ್ಥಿಕ ಸಲಹೆಗಾರರು ಸೂಚಿಸುತ್ತಾರೆ. ಉದಾಹರಣೆಗೆ ಓರ್ವ ವ್ಯಕ್ತಿ ತಾನು ಗೃಹ ಸಾಲಕ್ಕಾಗಿ ತೆಗೆದುಕೊಂಡಿರುವ ಸಾಲದ ಮೊತ್ತಕ್ಕೆ ವಾರ್ಷಿಕವಾಗಿ 1.2 ಲಕ್ಷ ರೂಪಾಯಿಯಷ್ಟು ಸಾಲ ಮರುಪಾವತಿ ಮಾಡುತ್ತಾನೆ ಎಂದಾದರೆ ಸೆಕ್ಷನ್ 80 ರ ಅಡಿಯಲ್ಲಿ 30,000 ನಷ್ಟು ಲಾಭ ಪಡೆಯುವುದಕ್ಕೆ ಸಾಧ್ಯವಾಗುವಷ್ಟು ಹೂಡಿಕೆ ಮಾಡಬೇಕಾಗುತ್ತದೆ. ಒಂದು ವೇಳೆ ಮನೆ ಆಸ್ತಿಯಿಂದ ನಷ್ಟ ಉಂಟಾದರೆ ಇದ್ದು ಅಂತಹ ನಷ್ಟವನ್ನು ಆಸ್ತಿಯಿಂದ ಬರಬಹುದಾದ ಆದಾಯಕ್ಕೆ ಪರಿಗಣಿಸದೇ ಬಿಡುವ ಅವಕಾಶವೂ ಇದ್ದು, ಆದಾಯ ತೆರಿಗೆಯ ಹೊರೆಯನ್ನು ಮತ್ತಷ್ಟು ಕಡಿಮೆ ಮಾಡಬಹುದಾಗಿದೆ. 
ಆದಾಗ್ಯೂ 80 ಸಿ ಹಾಗೂ ಸೆಕ್ಷನ್ 24 ರ ವ್ಯಾಪ್ತಿಯಲ್ಲಿ ಕ್ಲೈಮ್ ಮಾಡಬೇಕಾದರೆ ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. 80 ಸಿ ವ್ಯಾಪ್ತಿಯಲ್ಲಿನ ಕ್ಲೈಮ್ ವಿಚಾರದಲ್ಲಿ ಗೃಹ ಖರೀದಿದಾರ ಖರೀದಿಸಿದ ಆ ಆಸ್ತಿಯನ್ನು ಆ ದಿನಾಂಕದಿಂದ ಕನಿಷ್ಟ 5 ವರ್ಷ ತನ್ನಲ್ಲೇ ಉಳಿಸಿಕೊಂಡಿರಬೇಕಾಗುತ್ತದೆ. ಹಾಗಿಲ್ಲವಾದಲ್ಲಿ ಆ ಆಸ್ತಿಯನ್ನು ಮಾರಾಟ ಮಾಡಿದರೆ, 80 ಸಿ ವ್ಯಾಪ್ತಿಯಲ್ಲಿ ಕ್ಲೈಮ್ ಮಾಡಿದ ಮೊತ್ತವನ್ನು ಆಸ್ತಿ ಮಾರಾಟ ಮಾಡಿದ ವರ್ಷದ ಆದಾಯದಲ್ಲಿ ಸೇರಿಸಲಾಗುತ್ತದೆ. 
ಸೆಕ್ಷನ್ 24 ರ ವ್ಯಾಪ್ತಿಯಲ್ಲಿ ಸಾಲ ಮರುಪಾವತಿಯ ಬಡ್ಡಿಯ ಭಾಗದಿಂದ ಗರಿಷ್ಠ 2 ಲಕ್ಷ ರೂಪಾಯಿ ವರೆಗಿನ ಮೊತ್ತಕ್ಕೆ ನೀವು ಆದಾಯ ತೆರಿಗೆಯಿಂದ ವಿನಾಯಿತಿ ಪಡೆಯಬಹುದಾಗಿದೆ ಎಂಬುದು ತಿಳಿದೇ ಇದೆ. ಆದರೆ ಖರೀದಿಸಿದ, ನಿರ್ಮಿಸಿದ ಮನೆಯನ್ನು ಬಾಡಿಗೆಗೆ ನೀಡಿದರೆ ಪೂರ್ತಿ ಬಡ್ಡಿ ಕಡಿತಗೊಂಡು ತೆರಿಗೆ ವಿನಾಯಿತಿ ಸಿಗದೇ ಇರುವ ಸಾಧ್ಯತೆಗಳಿವೆ. ಮನೆ ಆಸ್ತಿಯಿಂದ ಉಂಟಾದ ನಷ್ಟಕ್ಕೆ ಒಂದು ವರ್ಷದಲ್ಲಿ 2 ಲಕ್ಷ ನಷ್ಟವನ್ನು ಕ್ಲೈಮ್ ಮಾಡಲು ಅವಕಾಶವಿದ್ದು ಉಳಿದ ನಷ್ಟವನ್ನು, ನಷ್ಟದ ಮೌಲ್ಯಮಾಪನದ ನಂತರದ ವರ್ಷಗಳಲ್ಲಿ ಕ್ಲೈಮ್ ಮಾಡಬಹುದಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT