ಸಾಂದರ್ಭಿಕ ಚಿತ್ರ 
ವಾಣಿಜ್ಯ

ವಿಜಯ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಕ್ಕೆ ದೇನಾ ಬ್ಯಾಂಕ್ ಸಮ್ಮತಿ !

ವಿಜಯ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಕ್ಕೆ ದೇನಾ ಬ್ಯಾಂಕ್ ಆಡಳಿತ ಮಂಡಳಿ ಸಮ್ಮತಿಸಿದೆ.

ಮುಂಬೈ : ವಿಜಯ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಕ್ಕೆ ದೇನಾ ಬ್ಯಾಂಕ್  ಆಡಳಿತ ಮಂಡಳಿ  ಸಮ್ಮತಿಸಿದೆ.

ದೇಶದಲ್ಲಿ ಎರಡನೇ  ಹಂತದ ಬ್ಯಾಂಕ್ ಗಳ ವಿಲೀನ ಪ್ರಕ್ರಿಯೆಯಲ್ಲಿ ಬ್ಯಾಂಕ್ ಆಫ್  ಬರೋಡಾ,ವಿಜಯ ಬ್ಯಾಂಕ್ ಹಾಗೂ ದೇನಾ ಬ್ಯಾಂಕ್ ಗಳನ್ನು ವಿಲೀನಗೊಳಿಸುವುದಾಗಿ  ಕೇಂದ್ರಸರ್ಕಾರ ಕಳೆದ ವಾರ ಹೇಳಿಕೆ ನೀಡಿತ್ತು.

ಜಾಗತಿಕ ಹಾಗೂ ದೇಶಿಯವಾಗಿ ಪರಿಣಾಮಕಾರಿಯಾಗಿ ಪೈಪೋಟಿ ನಡೆಸಲು ಮತ್ತು  ವಿಶ್ವದ ಬ್ಯಾಂಕ್ ಗಳಂತೆ  ವ್ಯವಹಾರ ನಡೆಸುವ ನಿಟ್ಟಿನಲ್ಲಿ ಎರಡನೇ ಹಂತದ ಬ್ಯಾಂಕ್ ಗಳ ವಿಲೀನಗೊಳಿಸಲಾಗುತ್ತಿದ್ದು, ವಿಜಯ ಬ್ಯಾಂಕ್ ಹಾಗೂ ಬರೋಡಾ ಬ್ಯಾಂಕಿನೊಂದಿಗೆ ವಿಲೀನಗೊಳಿಸಲು ಬ್ಯಾಂಕಿನ ಆಡಳಿತ ಮಂಡಳಿ ಸಭೆಯಲ್ಲಿ  ತೀರ್ಮಾನಿಸಲಾಯಿತು ಎಂದು ದೇನಾ ಬ್ಯಾಂಕ್ ಸ್ಪಷ್ಟಪಡಿಸಿದೆ.

ವಿಜಯ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನದಿಂದ  ಸದೃಢ ವಿಲೀನದ ಬ್ಯಾಂಕ್  ಕಾಣಬಹುದು ಹಾಗೂ ಹಣಕಾಸು ರಕ್ಷಣೆಯೊಂದಿಗೆ ಸ್ಥಿರತೆ ಹೊಂದಬಹುದಾಗಿದೆ.  ಸಾಲ ಬೆಳವಣಿಗೆ ಹಾಗೂ  ಹಣಕಾಸು ಒಳ ಹರಿಯುವಿಕೆ  ಅಭಿವೃದ್ದಿಯಾಗಲಿದೆ ಎಂದು ದೇನಾ ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ.

ಸ್ಟೇಟ್ ಬ್ಯಾಂಕ್ ಇಂಡಿಯಾ  ನಂತರ ಎರಡನೇ ಹಂತದ ಬ್ಯಾಂಕ್ ಗಳ ವಿಲೀನಕ್ಕೆ ಮುಂದಾಗಿದ್ದು,  ಜೂನ್ 2018ರಂದು ಈ ಮೂರು ಬ್ಯಾಂಕ್ ಗಳ ವ್ಯವಹಾರ 14. 82 ಟ್ರಿಲಿಯನ್ ನಷ್ಟಾಗಿತ್ತು.

ಈ ಮಧ್ಯೆ ಮಾತನಾಡಿದ ಹಣಕಾಸು ಸೇವಾ ಕಾರ್ಯದರ್ಶಿ ರಾಜೀವ್ ಕುಮಾರ್, ಬ್ಯಾಂಕ್ ಗಳ ವಿಲೀನದಿಂದ ಆರ್ಥಿಕವಾಗಿ  ಸದೃಢಗೊಳ್ಳಬಹುದು ಎಂದು ಹೇಳಿದ್ದಾರೆ.

ಏಪ್ರಿಲ್ 2017ರಲ್ಲಿ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾದಲ್ಲಿ ಐದು ಸಹವರ್ತಿ ಬ್ಯಾಂಕುಗಳು ವಿಲೀನಗೊಂಡಿದ್ದವು. ಈಗ ಬ್ಯಾಂಕ್ ಆಫ್ ಬರೋಡಾ, ವಿಜಯ, ಹಾಗೂ ದೇನಾ ಬ್ಯಾಂಕ್ ಗಳ ವಿಲೀನದಿಂದಾಗಿ ಸಾರ್ವಜನಿಕ ಬ್ಯಾಂಕ್ ಗಳ ಒಕ್ಕೂಟದ ಸಂಖ್ಯೆ 19ಕ್ಕೆ ಇಳಿಕೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ರದ್ದತಿಗೆ ಈಶ್ವರ್ ಖಂಡ್ರೆ ಪಟ್ಟು; UPSC ಮಾದರಿ ತನ್ನಿ ಎಂದು ಸಿಎಂಗೆ ಗ್ರಾಮೀಣಾಭಿವೃದ್ಧಿ ಸಚಿವ ಮನವಿ

'ಹಾಸ್ಯಾಸ್ಪದ, ನಾಚಿಕೆಗೇಡು': ಬ್ರಿಕ್ಸ್ ಭೋಜನಕೂಟದ ಮೆನು ಕುರಿತ ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ಆಕ್ರೋಶ

ಜೈಲಿನಲ್ಲಿ ಮಾಜಿ ಪ್ರಧಾನಿ: 52ನೇ ವಯಸ್ಸಿನಲ್ಲಿ ಎರಡನೇ ಮದುವೆಯಾದ ಇಮ್ರಾನ್ ಖಾನ್ ಮಾಜಿ ಪತ್ನಿ!

BBK 13: ಬಿಗ್‌ಬಾಸ್ ಮನೆಯಿಂದ ದಿಢೀರ್ ಹೊರಬಂದ ಓಂ ಪ್ರಕಾಶ್ ರಾವ್, ಆಸ್ಪತ್ರೆಗೆ ದಾಖಲು..!

ಪಾಕ್‌ನ ಹೊಸ ನವರಂಗಿ ಆಟ: FATF ಸಭೆಯ ಮುನ್ನ ಉಗ್ರ ಮಸೂದ್ ಅಜರ್ ಮೇಲಿನ ಬಹುಮಾನದ ಮೊತ್ತ 70 ಲಕ್ಷಕ್ಕೆ ಏರಿಕೆ!