ವಾಣಿಜ್ಯ

ಜೆಟ್ ಏರ್ ವೇಸ್ ಗೆ ತೈಲ ಪೂರೈಕೆ ನಿಲ್ಲಿಸಿದ ಇಂಡಿಯನ್ ಆಯಿಲ್

Raghavendra Adiga
ಮುಂಬೈ: ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಶುಕ್ರವಾರದಿಂದ ಜೆಟ್ ಏರ್ ವೇಸ್ ಗೆ  ಇಂಧನ ಸರಬರಾಜನ್ನು ನಿಲ್ಲಿಸಿದೆ.
ಜೆಟ್ ಏರ್ ವೇಸ್ ಸಾರ್ವಜನಿಕ ತೈಲ ಕಮ್ಪನಿಗೆ ನೀಡಲು ಹಣವಿಲ್ಲದ ಕಾರಣ ಶುಕ್ರವಾರ ಮಧ್ಯಾಹ್ನ 12ರಿಂದ ಇಂಧನ ಸರಬರಾಜನ್ನು ನಿಲ್ಲಿಸಲಾಗಿದೆ ಎಂದು  ಮೂಲಗಳು ತಿಳಿಸಿವೆ.
ಈ ವಿಚಾರವಾಗಿ ಜೆಟ್ ಏರ್ ವೇಸ್ ಇದುವರೆಗೆ ಪ್ರತಿಕ್ರಿಯೆ ನೀಡಿಲ್ಲ. ಜೆಟ್ ಏರ್ ವೇಸ್ ಹಣಕಾಸಿನ ಮುಗ್ಗಟ್ಟಿನಲ್ಲಿದ್ದು ಬುಧವಾರದಂದು ಸಂಸ್ಥೆಯ ಮಾಜಿ ಅಧ್ಯಕ್ಷ ರೇಶ್ ಗೋಯಲ್ ನಿಗದಿತ ಬಿಡುಗಡೆ ಹಣವನ್ನು ಖಾತ್ರಿಪಡಿಸಿಕೊಳ್ಳಲು ಲೇವಾದೇವಿದಾರರಿಂದ ಒಪ್ಪಂದ ಮಾಡಿಕೊಂಡಿರುವುದಾಗಿ ಹೇಳಿದ್ದರು.
ಮಾರ್ಚ್ 25ರಂದು ವಿಮಾನಯಾನ ಸಂಸ್ಥೆ ಮಂಡಳಿಯಿಂದ ಅನುಮೋದಿಸಲಾದ ಋಣಭಾರ ಪರಿಹಾರ ಯೋಜನೆಯಡಿ ಸಾಲದಾತರಿಂದ 1,500 ಕೋಟಿ ರೂ. ಹಣವನ್ನು ಇಕ್ವಿಟಿಗೆ ಪರಿವರ್ತಿಸುವ  ಜ್ಕ್ಕಾರ್ಯ ನಡೆಸಿದೆ. ಇದಲ್ಲದೆ ಮಂಡಳಿಯಿಂದ ಅಧ್ಯಕಾಹ ಗೋಯಲ್ ಹಾಗೂ ಅವರ ಪತ್ನಿ ಹೊರನಡೆಇದ್ದಾರೆ.
SCROLL FOR NEXT