ವಾಣಿಜ್ಯ

ಮುಳುಗುತ್ತಿರುವ ಜೆಟ್ ಎರ್ವೇಸ್ ಉಳಿಸಲು ಗಲ್ಫ್ ಮೂಲದ ಎನ್ನಾರೈಗಳ ಪ್ರಯತ್ನ

Raghavendra Adiga
ಬೆಂಗಳೂರು: ಜೆಟ್ ಏರ್ವೇಸ್ ಮಾಜಿ ಅಧ್ಯಕ್ಷ ನರೇಶ್ ಗೋಯಲ್ ಜೆಟ್ ಸಂಸ್ಥೆಯ ಷೇರುಗಳನ್ನು ತಮ್ಮ ಸಂಸ್ಥೆಗೆ ಮಾರಾಟ ಮಾಡಿದ್ದಾದರೆ ಕೇವಲ ಹತ್ತು ದಿನಗಳಲ್ಲಿ ಜೆಟ್ ಏರ್ವೇಸ್ ಸಂಸ್ಥೆಯನ್ನು ಮೊದಲ ಸ್ಥಿತಿಗೆ ತರುವುದು ಸಾಧ್ಯ ಎಂದು ಬೆಂಗಳುರು ಮೂಲದ ಅನಿವಾಸಿ ಭಾರತೀಯ ಸೌದಿ ಅರೇಬಿಯದಲ್ಲಿ ನಿರ್ಮಾಣ ಕ್ಷೇತ್ರದ ಸಂಸ್ಥೆ ಗೋಲ್ಡ್ ಟವರ್ ಗ್ರೂಪ್  ನ ಮಾಲೀಕರು ಹೇಳಿದ್ದಾರೆ.
ಮೂವರು ವ್ಯಕ್ತಿಗಳು, ಇವರಲ್ಲಿ ಇಬ್ಬರು ಭಾರತೀಯರಾಗಿದ್ದು ಈಗ ಸೌದಿ ಅರೇಬಿಯಾದಲ್ಲಿ ನೆಲೆಸಿ ಉದ್ಯಮಿಗಳಾದವರು  ಜೆಟ್ ಏರ್ವೇಸ್ ಸಂಸ್ಥೆಯನ್ನು ಮೇಲಕ್ಕೆತಲು ಬಯಸುತ್ತಿದ್ದಾರೆ ಎಂದು ಮೊಹಮ್ಮದ್ ನಾಗಮನ್ ಲತೀಫ್ ಗುರುವಾರ  ಮಾದ್ಯಮಗಳಿಗೆ ತಿಳಿಸಿದ್ದಾರೆ. 
"ಅವರು 8,000ದಿಂದ  10,000 ಕೋಟಿ ರೂ. ಹೂಡಿಕೆ ಮಾಡಲು ಸಿದ್ದರಿದ್ದಾರೆ.ಗೋಯಲ್ ಅವರ ಬಳಿಯಿರುವ ಸಂಸ್ಥೆಯ 24%  ಷೇರುಗಳು ಇವರಿಗೆ ಮಾರಾಟವಾಗಿದ್ದರೆ ಈ ಹೂಡಿಕೆ ಮಾಡಲು ಅವರು ತಯಾರಾಗಿದ್ದಾರೆ" ಲತೀಫ್ ಹೇಳಿದ್ದಾರೆ.
ತನ್ನ ಸ್ವಂತ ಸಂಸ್ಥೆ ಇಂಟರ್ನ್ಯಾಷನಲ್ ಐಕಾನಿಕ್ ಫೆಡರೇಶನ್ ಸ್ಥಾಪನೆಗಾಗಿ ನಗರಕ್ಕೆ ಆಗಮಿಸಿದ್ದೇನೆ. ಎಪ್ರಿಲ್ 19 ರಂದು ಜೆಟ್ ಏರ್ವೇಸ್ ಅಧಿಕೃತ ಟ್ವೀಟ್ ಕಾತೆಯಲ್ಲಿ ಅವರು ಈ ಮುಂದಿನಂತೆ ಬರೆದಿದ್ದಾಗಿ ಲತೀಫ್ ಹೇಳಿದರು -"ಜೆಟ್ ವೇರ್ವೇಸ್  ಸಿಇಒ ಮತ್ತು ನರೇಶ್ ಗೋಯಲ್ ಅವರೊಡನೆ ನಾನು ಸಂಸ್ಥೆಗೆ ಅಗತ್ಯವಾಗಿರುವ ತುರ್ತು ಬಂಡವಾಳದ ಕುರಿತು ಮಾತನಾಡಲು ಬಯಸುತ್ತೇನೆ.ಸಾಧ್ಯವಾದರೆ ನನಗೆ ನಿಮ್ಮ ವಿವರಗಳನ್ನು ಕಳಿಸಿ" 
ಲತೀಫ್ ಎಸ್ಬಿಐ ಅಧಿಕಾರಿಗಳನ್ನು ಸಂಪರ್ಕಿಸಿ ವಾಯುಯಾನ ಸಂಸ್ಥೆಯ ಉಳಿವಿಗಾಗಿ ತಾವು ಬಂಡವಾಳ ಹೂಡುವುದಾಗಿ ಹೇಳಿದ್ದಾರೆ. ಇದಕ್ಕಾಗಿ ಲತೀಫ್ ಯಾರನ್ನು ಸಂಪರ್ಕಿಸಿದ್ದರೆಂದು ಕೇಳಲು ಅವರು ತಮಗೆ ಪರಿಚಯವಿರುವ ಎಸ್ಬಿಐ ನ ಮುರುಡೇಶ್ವರ ಶಾಖೆಯ ಅಧಿಕಾರಿಯನ್ನು ಸಂಪರ್ಕಿಸಿದ್ದಾಗಿ ಅವರು ಒಪ್ಪಿದ್ದಾರೆ. ಆದರೆ ವಿಮಾನಯಾನ ಹಿನ್ನೆಲೆ ಇರುವ ಯಾವುದೇ ಸಂಸ್ಥೆಗಲ್ಲದೆ ಬೇರೊಂದು ಸಂಸ್ಥೆಗೆ ಕಂಪನಿಯಲ್ಲಿ ಹೂಡಿಕೆ ಮಾಡಲು ಅನುಮತಿ ಇಲ್ಲ ಎಂದು ಅವರು ಹೇಳಿದರೆಂದು ಲತೀಫ್ ಹೇಳುತ್ತಾರೆ.
ಗೋಲ್ಡ್ ಟವರ್ ಗ್ರೂಪ್ಸ್ ನ ವಹಿವಾಟಿನ ಸಂಬಂಧ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಲತೀಫ್ ಅದನ್ನು ಹಂಚಿಕೊಳ್ಳಲು ಇದು ಸರಿಯಾದ ಸಮಯವಲ್ಲ ಎಂದಿದ್ದಾರೆ  "ನರೇಶ್ ಗೋಯಲ್ ಮತ್ತು ಸಿಇಒ ವಿನಯ್ ದುಬೆ ಸೇರಿ ಎಲ್ಲಾ  ನೌಕರರೊಂದಿಗೂ ಸಭೆ ನಡೆಸಲು ನಾನು ವಿನಂತಿಸುತ್ತೇನೆ. ಇದರಿಂದಾಗಿ ನಾವು ಕತಾರ್ ಮತ್ತು ದುಬೈನಲ್ಲಿ ಭಾರತದ ಪ್ರಮುಖ ವಿಮಾನಯಾನ ಸಂಸ್ಥೆಗಳಿಗೆ ಹೂಡಿಕೆ  ಕುರಿತು ಮಾತನಾಡಬಹುದು. ಮುಂದಿನ 240 ಘಂಟೆಗಳಲ್ಲಿ ಅದು ಮತ್ತೊಮ್ಮೆ ಹಾರಾಟ ನಡೆಸುವುದನ್ನು ನಾವು ಖಾತ್ರಿಪಡಿಸಬಹುದು." ಲತೀಫ್ ಹೇಳಿದ್ದಾರೆ. ಆದರೆ ಈ ಕುರಿತಂತೆ ಪ್ರತಿಕ್ರಯಿಸಲು ಜೆಟ್ ಏರ್ವೇಸ್ ವಕ್ತಾರರು ಸಂಪರ್ಕಕ್ಕೆ ಸಿಕ್ಕಿಲ್ಲ.
SCROLL FOR NEXT