ವಾಣಿಜ್ಯ

ಸೈಬರ್ ಅಟ್ಯಾಕ್ ಆತಂಕ: ಚೀನೀ ಡೆವಲಪರ್ ಗೆ ಸೇರಿದ 100 ಆ್ಯಪ್ ಗಳು ಗೂಗಲ್ ಪ್ಲೇ ಸ್ಟೋರ್ ನಿಂದ ಔಟ್!

Nagaraja AB

ಸ್ಯಾನ್ ಫ್ರಾನ್ಸಿಸ್ಕೋ: ಶಂಕಿತ ಸೈಬರ್ ದಾಳಿ ಹಾಗೂ ಡೇಟಾ ಉಲ್ಲಂಘನೆ ಸಾಧ್ಯತೆ ಹಿನ್ನೆಲೆಯಲ್ಲಿ ಚೀನಿ ಡೆವಲಪರ್ ಗೆ ಸೇರಿದ 100 ಆ್ಯಪ್ ಗಳನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ತೆಗೆದುಹಾಕಲಾಗುತ್ತಿದೆ.

ಈಗಾಗಲೇ 40 ಆ್ಯಪ್ ಗಳನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ತೆಗೆದುಹಾಕಲಾಗಿದೆ. ಇನ್ನೂ ಅಧಿಕ ಆ್ಯಪ್ ಗಳನ್ನು ತೆಗೆಯುವುದರೊಂದಿಗೆ  ಕಂಪನಿಯು ಒಟ್ಟಾರೆಯಾಗಿ ಡಿಒ ಗ್ಲೋಬಲ್ ನ್ನು ನಿಷೇಧಿಸುವ ಉದ್ದೇಶವನ್ನು ಹೊಂದಿದೆ ಎಂದು ಬುಜ್ ಪೀಡ್ ನ್ಯೂಸ್ ಇಂದು ವರದಿ ಮಾಡಿದೆ.

ದುರುದ್ದೇಶಪೂರಿತ ವರ್ತನೆಗಳನ್ನು ಚುರುಕುನಿಂದ ತನಿಖೆ ಮಾಡುತ್ತೇವೆ.ಉಲ್ಲಂಘನೆ ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗೂಗಲ್ ವಕ್ತಾರರು ಹೇಳಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ದೈತ್ಯ ಸರ್ಚ್ ಇಂಜಿನ್  ಆಗಿರುವ ಗೂಗಲ್ ,  ಇಂಟರ್ನೆಟ್ ದೈತ್ಯ ಜಾಹೀರಾತು ಉತ್ಪನ್ನಗಳಿಗೆ ನಿಷೇಧ ವಿಸ್ತರಿಸಿದೆ.ಜಾಗತಿಕ ಅಪ್ಲಿಕೇಶನ್ ಗಳು  Google ನ AdMob ನೆಟ್ ವರ್ಕ್  ಮೂಲಕ ಖರೀದಿಸಲು ಜಾಹೀರಾತಿನ ಪಟ್ಟಿಯನ್ನು ಒದಗಿಸುವುದಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ಚೀನೀ ಕಂಪನಿಯು ಅದರ ಅಪ್ಲಿಕೇಶನ್ ಗಳಿಗಾಗಿ  250 ದಶಲಕ್ಷ ಕ್ಕಿಂತಲೂ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿದೆ ಮತ್ತು, ಆಂಡ್ರಾಯ್ಡ್  ಜಾಹೀರಾತು ವೇದಿಕೆ ಮೂಲಕ  ಸುಮಾರು 800 ದಶಲಕ್ಷ ಬಳಕೆದಾರರನ್ನು ತಲುಪುತ್ತಿದೆ ಎಂದು ಹೇಳಲಾಗಿದೆ

SCROLL FOR NEXT