ವಾಣಿಜ್ಯ

ಸೈರಸ್ ಮಿಸ್ತ್ರಿಗೆ ಮತ್ತೆ ಟಾಟಾ ಸನ್ಸ್ ಅಧ್ಯಕ್ಷ ಪಟ್ಟ: ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ ಆದೇಶ

Raghavendra Adiga

ನವದೆಹಲಿ: ರಾಷ್ಟ್ರೀಯ  ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (ಎನ್‌ಸಿಎಲ್‌ಎಟಿ ) ಸೈರಸ್ ಮಿಸ್ತ್ರಿ ಅವರನ್ನು ಟಾಟಾ ಸನ್ಸ್ ನ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಪುನಃಸ್ಥಾಪಿಸಲು ಆದೇಶಿಸಿದೆ. ಈ ಮೂಲಕ ಮಿಸ್ತ್ರಿ ಅವರು ನಡೆಸುತ್ತಿದ್ದ ಹೋರಾಟಕ್ಕೆ ಮಹತ್ವದ ಗೆಲುವು ಸಿಕ್ಕಂತಾಗಿದೆ.

ಎನ್‌ಸಿಎಲ್‌ಎಟಿ ಅಭಿಪ್ರಾಯಪಟ್ಟಂತೆ ಎನ್ ಚಂದ್ರ ಅವರನ್ನು ಕಾರ್ಯನಿರ್ವಾಹಕ ಅಧ್ಯಕ್ಷರನ್ನಾಗಿನೇಮಕ ಮಾಡಿರುವುದು ಕಾನೂನುಬಾಹಿರವಾಗಿದೆ

ಆದಾಗ್ಯೂ, ಪುನಃಸ್ಥಾಪನೆ ಆದೇಶವು ನಾಲ್ಕು ವಾರಗಳ ನಂತರ ಮಾತ್ರ ಕಾರ್ಯರೂಪಕ್ಕೆ ಬರಲಿದೆ ಎಂದು ನ್ಯಾಯಮಂಡಳಿ ಹೇಳಿದೆ, ಅಲ್ಲದೆ ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಕೆಗೆ ಟಾತಾ ಸಂಸ್ಥೆಗೆ ವಕಾಶ ನೀಡಲಾಗಿದೆ.

2012 ರಲ್ಲಿ ಟಾಟಾ ಗ್ರೂಪ್‌ನ ಆರನೇ ಅಧ್ಯಕ್ಷರಾಗಿ ನೇಮಕಗೊಂಡ ಸೈರಸ್ ಮಿಸ್ತ್ರಿ ಅವರನ್ನು ಅಕ್ಟೋಬರ್ 24, 2016 ರಂದು ಬೋರ್ಡ್ ರೂಂ ಅಸಮಾಧಾನದ ಬಳಿಕ ಉಚ್ಚಾಟಿಸಲಾಗಿತ್ತು. 

ಸೈರಸ್ ಇನ್ವೆಸ್ಟ್ಮೆಂಟ್ಸ್ ಮತ್ತು ಸ್ಟರ್ಲಿಂಗ್ ಇನ್ವೆಸ್ಟ್ಮೆಂಟ್ಸ್ ಕಾರ್ಪ್ ಎಂಬ ಎರಡು ಸ್ವಂತ ಸಂಸ್ಥೆಗಳ ಮೂಲಕ, ಮಿಸ್ತ್ರಿ ಟಾಟಾ ಸನ್ಸ್ ಮತ್ತು ಇತರರ ವಿರುದ್ಧ ಮುಂಬಯಿಯಲ್ಲಿರುವ ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್ ಅನ್ನು ಸಂಪರ್ಕಿಸಿ  ದಬ್ಬಾಳಿಕೆ ಮತ್ತು ದುರುಪಯೋಗ ಕುರಿತು ಆರೋಪಿಸಿದ್ದರು.ಆದರೆ ಈ ಹಿಂದೆ ನ್ಯಾಯಾಲಯ ಅವರ ಅರ್ಜಿಗಳನ್ನು ವಜಾ ಮಾಡಿತ್ತು.

ಫೆಬ್ರವರಿ 20, 2017 ರಂದು, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಮುಖ್ಯಸ್ಥರಾಗಿದ್ದ ಎನ್. ಚಂದ್ರಶೇಖರನ್ ಅವರು ಟಾಟಾ ಸನ್ಸ್ ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು ಆದರೆ ಈಗ ಎನ್‌ಸಿಎಲ್‌ಎಟಿ ಈ ನೇಮಕವನ್ನು ಕಾನೂನುಬಾಹಿರವೆಂದು ಘೋಷಿಸಿದೆ.

ಟಾಟಾ ಸನ್ಸ್‌ನಲ್ಲಿ ಮಿಸ್ತ್ರಿ ಕುಟುಂಬವು ಅತಿದೊಡ್ಡ ಷೇರುದಾರರಾಗಿದ್ದು, ಶೇಕಡಾ 18.4 ರಷ್ಟು ಪಾಲನ್ನು ಹೊಂದಿದೆ.

SCROLL FOR NEXT