ವಾಣಿಜ್ಯ

ಗ್ರಾಹಕರಿಗೆ ಸಿಹಿಸುದ್ದಿ! 790 ಟನ್ ವಿದೇಶೀ ಈರುಳ್ಳಿ ಭಾರತ ಮಾರುಕಟ್ಟೆಗೆ ಲಗ್ಗೆ

Raghavendra Adiga

ನವದೆಹಲಿ: ಗ್ರಾಹಕರಿಗೆ ಕಣ್ಣೀರು ತರಿಸಿದ್ದ ಈರುಳ್ಳಿ ಬೆಲೆ ತುಸು ಇಳಿಕೆಯಾಗುವ ಕಾಲ ಸನ್ನಿಹಿತವಾಗಿದೆ. 790 ಟನ್ ವಿದೇಶೀ ಈರುಳ್ಳಿ ಭಾರತ ಮಾರುಕಟ್ಟೆ ಪ್ರವೇಶಿಸಿದೆ. ಇದರಲ್ಲಿ ಕೆಲ ಭಾಗಗಳನ್ನು ದೆಹಲಿ ಹಾಗೂ ಆಂಧ್ರಪ್ರದೇಶಕ್ಕೆ ಕಳಿಸಲಾಗುತ್ತಿದ್ದು ಹೀಗೆ ರವಾನೆಯಾಗುವ ಈರುಳ್ಳಿಯ ಪ್ರಾರಂಭಿಕ ಬೆಲೆ ರು. 57-60 / ಕೆಜಿ ಆಗಿರಲಿದೆ ಎಂದು  ಗ್ರಾಹಕ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

 ಡಿಸೆಂಬರ್ ಅಂತ್ಯದ ವೇಳೆಗೆಅಂದಾಜು 12,000 ಟನ್ ಈರುಳ್ಳಿ ಅವಕವಾಗುವ ನಿರೀಕ್ಲ್ಷೆ ಇದೆ. ಸರ್ಕಾರದ ಪರವಾಗಿ ಪ್ರಮುಖ ಅಡಿಗೆ ಸಾಮಗ್ರಿಯಾಗಿರುವ ಈರುಳ್ಳಿ  ಆಮದು ಮಾಡಿಕೊಳ್ಳುತ್ತಿರುವ ಸರ್ಕಾರಿ ಎಂಎಂಟಿಸಿ ಈವರೆಗೆ 49,500 ಟನ್ ಈರುಳ್ಳಿಯನ್ನು ಗುತ್ತಿಗೆ ಪಡೆದಿದೆ.

ಚಿಲ್ಲರೆ ಈರುಳ್ಳಿ ಬೆಲೆಗಳು ಪ್ರಮುಖ ನಗರಗಳಲ್ಲಿ ಪ್ರತಿ ಕೆ.ಜಿ.ಗೆ ಸರಾಸರಿ 100 ರೂ. ಇದ್ದು ದೇಶದ ಕೆಲವು ಭಾಗಗಳಲ್ಲಿ ದರ ಪ್ರತಿ ಕೆ.ಜಿ.ಗೆ 160 ರೂ ತಲುಪಿದೆ. . "ತಲಾ 290 ಟನ್ ಮತ್ತು 500 ಟನ್ ಒಳಗೊಂಡ ಎರಡು ದಾಸ್ತಾನುಗಳುಈಗಾಗಲೇ ಮುಂಬೈ ತಲುಪಿದೆ. ನಾವು ಈರುಳ್ಳಿಯನ್ನು ಕೆಜಿ 57-60 / ಕೆಜಿ ದರದಲ್ಲಿ ರಾಜ್ಯ ಸರ್ಕಾರಗಳಿಗೆ ನೀಡುತ್ತಿದ್ದೇವೆ" ಎಂದು ಅಧಿಕಾರಿಗಳು ಹೇಳಿದ್ದಾರೆ. ಆಂಧ್ರಪ್ರದೇಶ ಮತ್ತು ದೆಹಲಿ ಸರ್ಕಾರಗಳು ಈಗಾಗಲೇ ತಮ್ಮ ಬೇಡಿಕೆಗಳನ್ನು ಮಂಡಿಸಿವೆ ಮತ್ತು ಆಮದು ಮಾಡಿದ ಈರುಳ್ಳಿಯನ್ನು ಖರೀದಿಸಲು ಮುಂದಾಗಿದೆ. ಟರ್ಕಿ, ಈಜಿಪ್ಟ್ ಮತ್ತು ಅಫ್ಘಾನಿಸ್ತಾನದಿಂದ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲಾಗಿದೆ. ದೇಶೀಯ ಸರಬರಾಜುಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಹೆಚಿನ ಉಪಕ್ರಮ ತೆಗೆದುಕೊಳ್ಲಲಾಗುತ್ತಿದೆ ಎಂದು ಅವರು ಹೇಳಿದರು. 

SCROLL FOR NEXT