ವಾಣಿಜ್ಯ

ದಶಕಗಳಲ್ಲಿ 2 ನೇ ಬಾರಿ ಬಜೆಟ್ ನಂತರ ಸೆನ್ಸೆಕ್ಸ್ ಮಹಾ ಕುಸಿತ!

Srinivas Rao BV
ಮುಂಬೈ: ಬಜೆಟ್ ನಂತರದಲ್ಲಿ ಸೆನ್ಸೆಕ್ಸ್ ಭಾರಿ ಕುಸಿತ ಕಂಡಿದ್ದು, ಈಕ್ವಿಟಿ ಹೂಡಿಕೆದಾರರು ಹತ್ತಿರ ಹತ್ತಿರ 3.2 ಲಕ್ಷ ಕೋಟಿ ರೂಪಾಯಿ ನಷ್ಟ ಎದುರಿಸಿದ್ದಾರೆ. 
11 ವರ್ಷಗಳಲ್ಲಿ 2 ನೇ ಬಾರಿಗೆ ಸೆನ್ಸೆಕ್ಸ್ ಈ ಪ್ರಮಾಣದಲ್ಲಿ ಕುಸಿತ ಕಂಡಿದೆ. ಇದಕ್ಕೂ ಮುನ್ನ 2018 ರಲ್ಲಿ ಇದೇ ಪರಿಸ್ಥಿತಿ ಉಂಟಾಗಿತ್ತು. ಜೂ. 09 ರಂದು ಸೆನ್ಸೆಕ್ಸ್ ಸೂಚ್ಯಂಕ 793 ಪಾಯಿಂಟ್ ಗಳಷ್ಟು ಕುಸಿತ ಕಂಡಿದೆ.   
ಸಂಸ್ಥೆಗಳಿಂದ ಈಕ್ವಿಟಿಯನ್ನು ವಾಪಸ್ ಖರೀದಿಸುವುದಕ್ಕೆ ತೆರಿಗೆ ವಿಧಿಸುವ ಸರ್ಕಾರದ ನಿರ್ಧಾರಕ್ಕೆ ಹೂಡಿಕೆದಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು,  ಇವೆಲ್ಲದರ ಪರಿಣಾಮ ದಶಕಗಳಲ್ಲಿ 2 ನೇ ಬಾರಿ ಸೆನ್ಸೆಕ್ಸ್ ಮಹಾ ಕುಸಿತ ಕಂದಿದೆ. 
SCROLL FOR NEXT