ವಾಣಿಜ್ಯ

ಆದಾಯ ತೆರಿಗೆ ಪಾವತಿ ವಿಧಾನದಲ್ಲಿ ಯಾವುದೇ ಬದಲಾವಣೆಯಿಲ್ಲ: ಸಿಬಿಡಿಟಿ

Sumana Upadhyaya
ನವದೆಹಲಿ: ಆದಾಯ ತೆರಿಗೆ ಪಾವತಿ ಅರ್ಜಿಯಲ್ಲಿ ಕೇಂದ್ರ ಸರ್ಕಾರ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ಉಪಯುಕ್ತತೆ ಸಾಫ್ಟ್ ವೇರ್ (ಯುಟಿಲಿಟಿ ಸಾಫ್ಟ್ ವೇರ್) ನ್ನು ಅಪ್ ಡೇಟ್ ಮಾಡಲಾಗಿದೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ಸ್ಪಷ್ಟನೆ ನೀಡಿದೆ.
ಆದಾಯ ತೆರಿಗೆ ಪಾವತಿ ವಿಧಾನದಲ್ಲಿ ಅತಿದೊಡ್ಡ ಬದಲಾವಣೆಯಾಗಿದೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ವದಂತಿಗಳನ್ನು ತಳ್ಳಿಹಾಕಿರುವ ಮಂಡಳಿ ಈ ಕುರಿತು ಹೇಳಿಕೆ ಹೊರಡಿಸಿದ್ದು ಯುಟಿಲಿಟಿ ಸಾಫ್ಟ್ ವೇರ್ ಗಳನ್ನು ಅಪ್ ಡೇಟ್ ಮಾಡುವುದರಿಂದ ಆದಾಯ ತೆರಿಗೆ ಪಾವತಿ ಮೇಲೆ ಯಾವುದೇ ಅಡ್ಡಿಯನ್ನುಂಟುಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಆದಾಯ ತೆರಿಗೆ ಪಾವತಿಗೆ ಈ ತಿಂಗಳು 31 ಕಡೆಯ ದಿನವಾಗಿದೆ.
ಇದುವರೆಗೆ ದೇಶದಲ್ಲಿ 1.38 ಕೋಟಿ ಘಟಕಗಳು ತಮ್ಮ ಆದಾಯ ತೆರಿಗೆ ವಿವರವನ್ನು ಸಲ್ಲಿಸಿವೆ. 
ಐಟಿಆರ್ ಅರ್ಜಿ 2 ಮತ್ತು 3ರಲ್ಲಿ ಕಳೆದ ಏಪ್ರಿಲ್ 1ರಂದು ಹೊರಡಿಸಿದ ಅಧಿಸೂಚನೆ ನಂತರ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ ಎಂದು ಸಿಬಿಡಿಟಿ ಸ್ಪಷ್ಟನೆ ನೀಡಿದೆ. 
SCROLL FOR NEXT