ವಾಣಿಜ್ಯ

ಆರ್ಥಿಕ ಬೆಳವಣಿಗೆಯಲ್ಲಿ 3 ವರ್ಷಗಳಲ್ಲಿ ಚೀನಾವನ್ನೇ ಹಿಂದಿಕ್ಕಲಿದೆ ಭಾರತ: ವಿಶ್ವಬ್ಯಾಂಕ್ ವರದಿ

Raghavendra Adiga
ವಾಷಿಂಗ್ಟನ್: ಮುಂದಿನ ಮೂರು ವರ್ಷಗಳಲ್ಲಿ ಭಾರತದ ಆರ್ಥಿಕತೆಯು ಶೇ. 7.5 ರಷ್ಟು ಬೆಳವಣಿಗೆಯಾಗಲಿದೆ ಎಂದು ವಿಶ್ವಬ್ಯಾಂಕ್ ಮುನ್ಸೂಚನೆ ನೀಡಿದೆ. ಈ ಮೂಲಕ ಇತ್ತೀಚೆಗೆ ನೂತನವಾಗಿ ರಚಿನೆಯಾಗಿರುವ ಕೇಂದ್ರ ಸರ್ಕಾರಕ್ಕೆ ಅಂತರಾಷ್ಟ್ರೀಯ ಸಂಸ್ಥೆಯಿಂದ ಶುಭ ಸುದ್ದಿ ದೊರಕಿದೆ.
ಮಾರ್ಚ್ 31ಕ್ಕೆ ಕೊನೆಗೊಂಡ 2018/19 ಆರ್ಥಿಕ ವರ್ಷದಲ್ಲಿ ಭಾರತ ಆರ್ಥಿಕತೆ ಶೇ. 7.2ರಷ್ಟು ವೃದ್ದಿಯಾಗಿದೆ ಎಂದು ತನ್ನ ಜಾಗತಿಕ ಆರ್ಥಿಕ ನಿರೀಕ್ಷಣಾ ವರದಿಯಲ್ಲಿ ವಿಶ್ವಬ್ಯಾಂಕ್ ಹೇಳಿದೆ.
ಸರ್ಕಾರದ ಬಳಕೆ ಪ್ರಮಾನ ಇಳಿಮುಖವಾಗಿರುವುದು ಹೂಡಿಕೆ ಹೆಚ್ಚಳವಾಗಲು ಆ ಮೂಲಕ ಮೂಲಭೂತ ಸೌಕರ್ಯ ಸುಧಾರಿಸಲು ಸಹಾಯಕವಾಗಿದೆ.
ಇನ್ನು ಚೀನಾ ಆರ್ಥಿಕ ಬೆಳವಣಿಗೆ ಮುಂದಿನ ಮೂರು ವರ್ಷಗಳಲ್ಲಿ ಸತತ ಇಳಿಮುಖವಾಗಲಿದೆ ಎಂದು ವಿಶ್ವಬ್ಯಾಂಕ್ ವರದಿ ಉಲ್ಲೇಖಿಸಿದೆ. 2018 ರಲ್ಲಿ 6.6 ಶೇಕಡ ಬೆಳವಣಿಗೆಯ ದರ ಹೊಂದಿದ್ದ ಚೀನಾ ಮುಂಬರುವ 2019, 2020ರಲ್ಲಿ ಕ್ರಮವಾಗಿ 6.2 ಶೇಕಡ,  6.1 ಶೇಕಡಾ ತಲುಪಲಿದ್ದು 2021 ರಲ್ಲಿ 6 ಶೇಕಡಾ ಗೆ ಇಳಿಕೆಯಾಗಲಿದೆ.
ಇದರೊಂದಿಗೆ, ಭಾರತವು ವೇಗವಾಗಿ ಬೆಳೆಯುತ್ತಿರುವ ಉದಯೋನ್ಮುಖ ಆರ್ಥಿಕತೆಯ ಸ್ಥಾನವನ್ನು ಉಳಿಸಿಕೊಳ್ಳುವತ್ತ ಮುನ್ನುಗ್ಗುತ್ತದೆ. 2021 ರ ಹೊತ್ತಿಗೆ ಚೀನಾಗಿಂತ ಭಾರತದ ಆರ್ಥಿಕ ಬೆಳವಣಿಗೆ ದರ ಶೇಕಡಾ 1.5 ರಷ್ಟು ಹೆಚ್ಚಳವಾಗಿರಲಿದೆ.
SCROLL FOR NEXT