ವಾಣಿಜ್ಯ

ಏರ್‌ಟೆಲ್, ವೊಡಾಫೋನ್ ಐಡಿಯಾ ಬಳಿಕ ಜಿಯೋದಿಂದ ಕರೆ, ಡೇಟಾ ಶುಲ್ಕ ಏರಿಕೆ ಶಾಕ್!

Raghavendra Adiga

ನವದೆಹಲಿ: ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಲಿಮಿಟೆಡ್ ಗಳು ತಮ್ಮ ಮೊಬೈಲ್ ಕರೆ ಶುಲ್ಕ ಹೆಚ್ಚಳ ಮಾಡುವುದಾಗಿ ಹೇಳಿದ ನಂತರ ಇದೀಗ ರಿಲಯನ್ಸ್ ಜಿಯೋ ಸಹ ತನ್ನ ಗ್ರಾಹಕರಿಗೆ ಶಾಕ್ ನೀಡಿದೆ. ಮುಂದಿನ ಕೆಲವು ವಾರಗಳಲ್ಲಿ ಮೊಬೈಲ್ ಫೋನ್ ಕರೆ ಮತ್ತು ಡೇಟಾ ಶುಲ್ಕವನ್ನು ಹೆಚ್ಚಿಸುವುದಾಗಿ ಬಿಲಿಯನೇರ್ ಮುಖೇಶ್ ಅಂಬಾನಿಯ ರಿಲಯನ್ಸ್ ಜಿಯೋ ಮಂಗಳವಾರ ತಿಳಿಸಿದೆ.

ಡಿಸೆಂಬರ್ ನಿಂದ  ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಲಿಮಿಟೆಡ್ ಕರೆ ಮತ್ತು ಡೇಟಾ ಶುಲ್ಕ ಹೆಚ್ಚಳ ಮಾಡುವುದಾಗಿ ಹೇಳಿದ ಒಂದು ದಿನದ ತರುವಾಯ ಜಿಯೋ ಈ ಹೇಳಿಕೆ ನೀಡಿದೆ.

ಟೆಲಿಕಾಂ ಸುಂಕಗಳಲ್ಲಿ ಪರಿಷ್ಕರಣೆಗಾಗಿ ಟೆಲಿಕಾಂ ನಿಯಂತ್ರಕ ಟ್ರಾಯ್ ಸಮಾಲೋಚನೆ ಪ್ರಕ್ರಿಯೆಯನ್ನು ಪ್ರಾರಂಭಿಸುವ ಸಾಧ್ಯತೆಯಿದೆ ಎಂದು ಜಿಯೋ ಹೇಳಿದೆ.

"ಇತರ ನಿರ್ವಾಹಕರಂತೆ, ನಾವು ಸರ್ಕಾರದೊಂದಿಗೆ ಕೆಲಸ ಮಾಡುತ್ತೇವೆ ಮತ್ತು ಭಾರತೀಯ ಗ್ರಾಹಕರಿಗೆ ಅನುಕೂಲವಾಗುವಂತೆ ಉದ್ಯಮವನ್ನು ಬಲಪಡಿಸಲು ಟ್ರಾಯ್ ಜತೆ ಸಹಕರಿಸುತ್ತೇವೆ. ಡೇಟಾ ಬಳಕೆ ಅಥವಾ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ ಬೀರದ ರೀತಿಯಲ್ಲಿ ಮುಂದಿನ ಕೆಲವು ವಾರಗಳಲ್ಲಿ ಸುಂಕಗಳಲ್ಲಿ ಸೂಕ್ತ ಹೆಚ್ಚಳ ಸೇರಿದಂತೆ ಹಲವು ಕ್ರಮಗಳನ್ನು ತೆಗೆದುಕೊಳ್ಲಲಿದ್ದೇವೆ. " ಅದು ಹೇಳಿಕೆಯಲ್ಲಿ ತಿಳಿಸಿದೆ.

SCROLL FOR NEXT