ವಾಣಿಜ್ಯ

ಮದುವೆ ಖರ್ಚಿಗೆ ಹಣ ಬೇಕೆ?: ಆನ್ ಲೈನ್ ನಲ್ಲಿ ಸಿಗಲಿದೆ ವೈಯಕ್ತಿಕ ಸಾಲ 

Sumana Upadhyaya

ಮದುವೆ ಹೆಣ್ಣು-ಗಂಡು ಇಬ್ಬರ ಬದುಕಿನಲ್ಲಿಯೂ ಅತ್ಯಂತ ಮುಖ್ಯ ಘಟ್ಟ. ಜೀವನದಲ್ಲಿ ಒಂದು ಬಾರಿ ಆಗುವ ಮದುವೆ ಜೀವನಪೂರ್ತಿ ನೆನಪಿನಲ್ಲಿಟ್ಟುಕೊಳ್ಳುವಂತೆ ಅದ್ದೂರಿಯಾಗಿ ನೆರವೇರಬೇಕೆಂದು ಬಹುತೇಕರ ಆಸೆಯಾಗಿರುತ್ತದೆ. ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು ಎಂಬ ಗಾದೆ ಮಾತಿದೆ. ಈ ಎರಡೂ ಕೆಲಸಗಳನ್ನು ಕೈತುಂಬಾ ದುಡ್ಡು ಇಟ್ಟುಕೊಂಡು ನೆರವೇರಿಸುವವರು ಬಹಳ ಕಡಿಮೆ. ಮದುವೆಗೆ ಖರ್ಚಿಗೆ ಸಾಕಷ್ಟು ಹಣ ಬೇಕಾಗುತ್ತದೆ. ಇದ್ದಕ್ಕಿದ್ದಂತೆ ಎಲ್ಲಿಂದ ಹಣ ತರುವುದು, ಕೊನೆ ಗಳಿಗೆಯಲ್ಲಿ ಮದುವೆ ಖರ್ಚಿಗೆ ಯಾರು ಹಣ ಕೊಡುತ್ತಾರೆ ಎಂಬ ತಲೆಬಿಸಿ ಹಲವರಿಗೆ ಬರುವುದಂತೂ ಸುಳ್ಳಲ್ಲ.


ಇಂತವರ ಪಾಲಿಗೆ ವರದಾನವಾಗಿದೆ ಆನ್ ಲೈನ್ ವೈಯಕ್ತಿಕ ಸಾಲ. ಇದು ಮದುವೆಗಾಗಿಯೇ ನೀಡುವ ವೈಯಕ್ತಿಕ ಸಾಲವಾಗಿರುತ್ತದೆ. ಭದ್ರ ಆಧಾರ ಮತ್ತು ನಿರ್ಬಂಧ ಮುಕ್ತವಾಗಿ ಹಣ ಒದಗಿಸುವುದರಿಂದ ಆನ್ ಲೈನ್ ವೈಯಕ್ತಿಕ ಸಾಲ ಯೋಜನೆ ಇತ್ತೀಚಿನ ದಿನಗಳಲ್ಲಿ ಜನಪ್ರಿಯವಾಗಿದೆ. ಎಕನಾಮಿಕ್ ಟೈಮ್ಸ್ ಮಾಡಿದ ಸಮೀಕ್ಷೆ ಪ್ರಕಾರ 2018-19ರಲ್ಲಿ, ಬಂದಿರುವ ಸಾಲ ಅರ್ಜಿಗಳಲ್ಲಿ ಶೇಕಡಾ 20ರಷ್ಟು ಮಂದಿ ಮದುವೆಗೆ ಖರ್ಚಿಗೆ ಸಾಲ ಕೇಳಿದವರು.

ಇದನ್ನು ಯುವ ಜನತೆ  ಹೆಚ್ಚಾಗಿ ಬಯಸಲು ಕಾರಣ ಸುಲಭ, ಸರಳ ಮತ್ತು ಶೀಘ್ರ ಅರ್ಜಿ ಸಲ್ಲಿಕೆ ಮತ್ತು ಕೈಗೆ ಹಣ ಸಿಗುವ ಸೌಲಭ್ಯ. 
ಆನ್ ಲೈನ್ ಪರ್ಸನಲ್ ಲೋನ್ ನ ಲಾಭಗಳು ಏನೇನು, ತಿಳಿದುಕೊಳ್ಳೋಣ ಬನ್ನಿ: 


ದೊಡ್ಡ ಬಜೆಟ್ ನ ಮದುವೆ ಖರ್ಚುಗಳ ನಿರ್ವಹಣೆಗೆ ಬಜಾಜ್ ಫಿನ್ಸರ್ವ್ ಹಣಕಾಸು ಸಂಸ್ಥೆ ವೈಯಕ್ತಿಕ ಸಾಲದಡಿ ಮದುವೆಗೆ 25 ಲಕ್ಷದವರೆಗೆ ಸಾಲ ಕೊಡುತ್ತದೆ. ಮದುವೆಯ ಜ್ಯುವೆಲ್ಲರಿಯಿಂದ ಹಿಡಿದು ಹೊಟೇಲ್, ಅತಿಥಿಗಳು ಮತ್ತು ಫೋಟೋಗ್ರಾಫರ್ ವರೆಗೆ ಒಂದೇ ಸಾಲದಡಿ ಖರ್ಚು ಮಾಡಬಹುದು. 


ಮದುವೆಗೆ ಆನ್ ಲೈನ್ ನಲ್ಲಿ ವೈಯಕ್ತಿಕ ಸಾಲವನ್ನು ಪಡೆದ ನಂತರ ತಿಂಗಳ ಇಎಂಐ ಮೂಲಕ ಸಾಲ ಹಿಂತಿರುಗಿಸಬೇಕಾಗುತ್ತದೆ. ಒಂದೇ ಬಾರಿಗೆ ಪೂರ್ಣ ಮೊತ್ತದ ಸಾಲ ನೀಡಿದ್ದಾರೆಂದ ಮಾತ್ರಕ್ಕೆ ತರಾತುರಿಯಿಂದ ಅದನ್ನು ವಾಪಸ್ ಕೊಡಬೇಕಾಗಿಲ್ಲ. ನಿಮ್ಮ ಹಣಕಾಸು ಸ್ಥಿತಿಗತಿ ಆಧರಿಸಿ ಪ್ರತಿ ತಿಂಗಳು ತೀರಿಸುತ್ತಾ ಬಂದರೆ ಸಾಕು. ಬಜಾಜ್ ಫಿನ್ಸರ್ವ್ ಸಾಲ ತೀರಿಸಲು 60 ತಿಂಗಳವರೆಗೆ ಸಮಯಾವಕಾಶ ನೀಡುತ್ತದೆ. ತಿಂಗಳಿಗೆ ಎಷ್ಟು ಹಣ ಕಟ್ಟಬೇಕು ಎಂದು ಪರ್ಸನಲ್ ಲೋನ್ ಕ್ಯಾಲ್ಕ್ಯುಲೇಟರ್ ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ. 


ಮದುವೆ ಸಂದರ್ಭದಲ್ಲಿ ಕೊನೆ ಕ್ಷಣದಲ್ಲಿ ಖರ್ಚುಗಳು ಬರಬಹುದು. ಅಂತಹ ಸಂದರ್ಭದಲ್ಲಿ ಖರ್ಚುವೆಚ್ಚಗಳನ್ನು ನಿರ್ವಹಿಸಲು ಬಜಾಜ್ ಫಿನ್ಸರ್ವ್ ಸುಲಭ ಸಾಲ ಸೌಲಭ್ಯವನ್ನು ನೀಡುತ್ತದೆ. ಕೊನೆ ಕ್ಷಣದಲ್ಲಿ ಹೆಚ್ಚಿನ ಸಾಲವನ್ನು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಪಡೆಯಬಹುದು. 


ಆನ್ ಲೈನ್ ವೈಯಕ್ತಿಕ ಸಾಲ ಯೋಜನೆಯಡಿ ನಿಮಗೆ ಕೂಡಲೇ ಹಣ ಸಿಗುತ್ತದೆ. ಕ್ಷಣ ಕ್ಷಣದ ಯೋಜನೆ ಹಾಕಿಕೊಂಡು ಕೂಡಲೇ ಹಣ ಪಡೆಯಬಹುದು. ದಾಖಲೆಗಳನ್ನು ಪರಿಶೀಲಿಸಿದ 24 ಗಂಟೆಯೊಳಗೆ ಕೇವಲ 5 ನಿಮಿಷಗಳಲ್ಲಿ ಸಾಲದ ಮೊತ್ತ ನಿಮ್ಮ ಕೈ ಸೇರುತ್ತದೆ. ಹೀಗಾಗಿ ಮದುವೆ ಸಮಯದಲ್ಲಿ ವೈಯಕ್ತಿಕ ಸಾಲ ಬೇಕೆಂದರೆ ಬಜಾಜ್ ಫಿನ್ಸರ್ವ್ ಮೊರೆ ಹೋಗಬಹುದು.

SCROLL FOR NEXT