ವಾಣಿಜ್ಯ

ರಿಲಯನ್ಸ್‌ ಕಮ್ಯುನಿಕೇಷನ್ಸ್ ನಿರ್ದೇಶಕ ಅನಿಲ್ ಅಂಬಾನಿ ರಾಜೀನಾಮೆ ತಿರಸ್ಕೃತ

Raghavendra Adiga

ಮುಂಬೈ: ರಿಲಯನ್ಸ್ ಕಮ್ಯುನಿಕೇಷನ್ಸ್ ನಿರ್ದೇಶಕ  ಅನಿಲ್ ಅಂಬಾನಿ ಮತ್ತು ಇತರ ನಾಲ್ವರು ನಿರ್ದೇಶಕರ ರಾಜೀನಾಮೆಯನ್ನು ಕಂಪನಿಯ ಸಾಲದಾತರು ತಿರಸ್ಕರಿಸಿದ್ದಾರೆ. ಹಾಗೆಯೇ ಪ್ರಸ್ತುತ ನಡೆಯುತ್ತಿರುವ ಕಾರ್ಪೊರೇಟ್ ದಿವಾಳಿತನ ಪರಿಹಾರ ಪ್ರಕ್ರಿಯೆಯಲ್ಲಿ ಸಹಕರಿಸುವಂತೆ ತಿಳಿಸಿದ್ದಾರೆ.

ಅಂಬಾನಿ ಮತ್ತು ನಾಲ್ಕು ನಿರ್ದೇಶಕರಾದ ಅನಿಲ್ ಅಂಬಾನಿ, ಛಾಯಾ ವಿರಾನಿ, ರ್‍ಯಾನಾ ಕರಾನಿ, ಮಂಜರಿ ಕಾಕೆರ್ ಮತ್ತು ಸುರೇಶ್ ರಂಗಾಚಾರ್ ಅವರುಗಳು ಈ ತಿಂಗಳ ಪ್ರಾರಂಭದಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು.

ಬಿಎಸ್ಇ ಫೈಲಿಂಗ್ಸ್ ನಲ್ಲಿ ಆರ್ಕಾಂ ತನ್ನ ಸಾಲಗಾರರ ಸಮಿತಿ (ಸಿಒಸಿ) ನವೆಂಬರ್ 20 ರಂದು ಸಭೆ ಸೇರಿದೆ ಎಂದು ಹೇಳಿದೆ.ಸಮಿತಿಯು ರಾಜೀನಾಮೆಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಸರ್ವಾನುಮತದ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ" ಎಂದು ಅದು ತಿಳಿಸಿದೆ.

"ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿಲ್ಲ ಎಂದು ಆರ್‌ಕಾಂನ ಮೇಲ್ಕಂಡ ನಿರ್ದೇಶಕರಿಗೆ  ತಿಳಿಸಲಾಗುತ್ತಿದೆ ಮತ್ತು ಆರ್‌ಸಿಒಎಂ ನಿರ್ದೇಶಕರಾಗಿ ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಮುಂದುವರೆಸಲು  ದಿವಾಳಿತನ ಪರಿಹಾರ ಪ್ರಕ್ರಿಯೆಯಲ್ಲಿ ಮುಂದುವರೆಸಲು ಮತ್ತು ನಿರ್ಣಯಕ್ಕೆ ಎಲ್ಲಾ ಸಹಕಾರವನ್ನು ನೀಡುವಂತೆ ಸೂಚಿಸಲಾಗಿದೆ" 

ಶಾಸನಬದ್ಧ ಬಾಕಿ ಕುರಿತು ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಹೊಣೆಗಾರಿಕೆಗಳಿಗೆ ಅವಕಾಶ ನೀಡಿದ್ದರಿಂದ ಆರ್‌ಕಾಂ 2019 ರ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 30,142 ಕೋಟಿ ರೂ.ನಷ್ಟವನ್ನು ತೋರಿಸಿದೆ.

SCROLL FOR NEXT