ವಾಣಿಜ್ಯ

ಟಿವಿಎಸ್ ಮೋಟಾರ್ ಕಂಪನಿ ಸೆಪ್ಟೆಂಬರ್‌ ಮಾರಾಟ ಶೇ.9ರಷ್ಟು ಏರಿಕೆ

Srinivas Rao BV

ಹೊಸೂರು: ವಾಹನ ಕ್ಷೇತ್ರದಲ್ಲಿ ತೀವ್ರ ಸಂಕಷ್ಟದ ನಡುವೆಯೂ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ತಯಾರಕ ಟಿವಿಎಸ್ ಮೋಟಾರ್ ಕಂಪನಿ ಈ ವರ್ಷದ ಸೆಪ್ಟೆಂಬರ್‌ನಲ್ಲಿ 3,15,912 ವಾಹನಗಳನ್ನು ಮಾರಾಟ ಮಾಡಿ ಶೇ.9ರಷ್ಟು ಮಾರಾಟ ಬೆಳವಣಿಗೆ ದಾಖಲಿಸಿದೆ.

ಕಂಪನಿ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ 423,939 ವಾಹನಗಳನ್ನು ಮಾರಾಟ ಮಾಡಿತ್ತು. 2018 ರ ಸೆಪ್ಟೆಂಬರ್ ತಿಂಗಳಲ್ಲಿ 4, 10,657 ವಾಹನಗಳ ಮಾರಾಟಕ್ಕೆ ಹೋಲಿಸಿದರೆ 2019ರ ಸೆಪ್ಟೆಂಬರ್‌ನಲ್ಲಿ ಒಟ್ಟು ದ್ವಿಚಕ್ರ ವಾಹನ ಮಾರಾಟ 3,00,909 ವಾಹನಗಳು. ದೇಶೀಯ ದ್ವಿಚಕ್ರ ವಾಹನ ಮಾರಾಟವು ಸೆಪ್ಟೆಂಬರ್ 2019ರಲ್ಲಿ 243,163 ವಾಹನ ಮಾರಾಟವನ್ನು ನೋಂದಾಯಿಸಿದೆ ಎಂದು ಕಂಪನಿ ಪ್ರಕಟಣೆ ತಿಳಿಸಿದೆ.

ಮೋಟಾರ್‌ಸೈಕಲ್ ಸೆಪ್ಟೆಂಬರ್ 2019ರಲ್ಲಿ 1,23,921 ಯುನಿಟ್‌ಗಳ ಮಾರಾಟವನ್ನು ದಾಖಲಿಸಿದ್ದು, 2018 ರ ಸೆಪ್ಟೆಂಬರ್‌ನಲ್ಲಿ 166,489 ಯುನಿಟ್‌ಗಳ ಮಾರಾಟವಾಗಿತ್ತು.

SCROLL FOR NEXT