ವಾಣಿಜ್ಯ

ಸಗಟು ಮಾರುಕಟ್ಟೆ: ಹಣದುಬ್ಬರ ಪ್ರಮಾಣ ಶೇ.0.33ಕ್ಕೆ ಇಳಿಕೆ

Raghavendra Adiga

ಸಗಟು ಬೆಲೆ ಆಧಾರಿತ ಹಣದುಬ್ಬರವು ಸೆಪ್ಟೆಂಬರ್‌ನಲ್ಲಿ ಶೇಕಡಾ 0.33 ಕ್ಕೆ ಇಳಿದಿದೆ, ಆಹಾರೇತರ ಉತ್ಪನ್ನಗಳ ಬೆಲೆ  ಕುಸಿತದಿಂದಾಗಿ ಹಣದುಬ್ಬರ ಪ್ರಮಾಣ ಕುಸಿದಿದೆ. ಆಗಸ್ಟ್‌ನಲ್ಲಿ ಇದು 1.08 ರಷ್ಟಿತ್ತು ಎಂದು ಸರ್ಕಾರದ ಅಂಕಿ ಅಂಶಗಳು ತೋರಿಸಿದೆ

ಮಾಸಿಕ ಸಗಟು ಬೆಲೆ ಸೂಚ್ಯಂಕವನ್ನು ಆಧರಿಸಿದ ವಾರ್ಷಿಕ ಹಣದುಬ್ಬರ ದರವು ಸೆಪ್ಟೆಂಬರ್ 2018 ರಲ್ಲಿ ಶೇಕಡಾ 5.22 ರಷ್ಟಿತ್ತು.

ತಿಂಗಳಲ್ಲಿ ಆಹಾರಉತ್ಪನ್ನಗಳ ಬೆಲೆ  ಏರಿಕೆಯ ಪ್ರಮಾಣವು ಶೇಕಡಾ 7.47ರಷ್ಟಾಗಿದೆ. ಆಹರೇತರ ಉತ್ಪನ್ನಗಳ ಬೆಲೆ ಶೇಕಡಾ 2.18 ರಷ್ಟಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಬಿಡುಗಡೆ ಮಾಡಿದ ಅಂಕಿಅಂಶಗದಲ್ಲಿ ವಿವರಿಸಿದೆ.

SCROLL FOR NEXT