ವಾಣಿಜ್ಯ

4ಜಿ ಸೇವೆ ಪ್ರಾರಂಭಕ್ಕೆ ಬಿಎಸ್ಎನ್ಎಲ್ ಸಿದ್ದತೆ, ಶೀಘ್ರದಲ್ಲೇ ಗ್ರಾಹಕರಿಗೆ ವೀಡಿಯೊ ಕರೆ ಸೌಲಭ್ಯ

Raghavendra Adiga

ನವದೆಹಲಿ: ತನ್ನ ಪ್ರತಿಸ್ಪರ್ಧಿ ಸಂಸ್ಥೆಗಲಾದ ರಿಲಯನ್ಸ್ ಜಿಯೋ, ಏರ್‌ಟೆಲ್, ವೊಡಾಫೋನ್ ಗಳಿಂದ ಗ್ರಾಹಕರನ್ನು ಪುನಃ ತನ್ನತ್ತ ಸೆಳೆದುಕೊಳ್ಳಲು ಬಿಎಸ್‌ಎನ್‌ಎಲ್  ಮುಂದಾಗಿದ್ದು ಈ ನಿಟ್ಟಿನಲ್ಲಿ ’ತನ್ನ 4ಜಿ ಸೇವೆಯನ್ನು ದೇಶಾದ್ಯಂತ ವಿಸ್ತರಿಸಲು ತೀರ್ಮಾನಿಸಿದೆ.

ಮಾಧ್ಯಮ ವರದಿಗಳ ಪ್ರಕಾರ, ಬಿಎಸ್ಎನ್ಎಲ್ ತನ್ನ VoLTE ಸೇವೆಗಳನ್ನು ತರಲು ಯೋಜಿಸುತ್ತಿದೆ. ಶಿಯೋಮಿ, ವಿವೊ, ನೋಕಿಯಾ, ಸೋನಿಯಂತಹ 30 ಸ್ಮಾರ್ಟ್‌ಫೋನ್ ಮಾದರಿಗಳೊಂದಿಗೆ VoLTE ಸೇವೆಯು ಈಗಾಗಲೇ  ಪರೀಕ್ಷಾ ಹಂತದಲ್ಲಿದೆ.ಈ ಸೇವೆ ಪ್ರಾರಂಭಿಸುವುದರೊಡನೆ ಬಿಎಸ್‌ಎನ್‌ಎಲ್ ಬಳಕೆದಾರರು ಡೇಟಾದ ಮೂಲಕ ಧ್ವನಿ ಮತ್ತು ವೀಡಿಯೊ ಕರೆಗಳನ್ನು ಮಾಡಲು ಸಾಧ್ಯವಾಗುತ್ತದೆ.

ಟೆಲಿಕಾಂ ಸಂಸ್ಥೆ ತನ್ನ ಸಧ್ಯದ 3ಜಿ ನೆಟ್‌ವರ್ಕ್‌ಗಳನ್ನು ಬದಲಾಯಿಸುವ 4ಜಿ ಸೇವೆ ಪ್ರಾರಂಭಿಸುವುದಾಗಿ ಹೇಳಿದೆ.ಎಸ್ಎನ್ಎಲ್ ಕೆಲವು ವಲಯಗಳಲ್ಲಿ ತನ್ನ 3 ಜಿ ಸ್ಪೆಕ್ಟ್ರಮ್ ಅನ್ನು 4ಜಿ ಗೆ ಮರುಹೊಂದಿಸಿದೆ ಎಂದು ವರದಿಯಾಗಿದೆ. ಎಲ್ಲೆಡೆ ಈ ಪ್ರಕ್ರಿಯೆ ಮುಗಿದ ನಂತರ ಎಲ್ಲಾ ಬಿಎಸ್‌ಎನ್‌ಎಲ್ ಬಳಕೆದಾರರು 4ಜಿ ಸಿಮ್ ಕಾರ್ಡ್‌ಗೆ ಅಪ್‌ಗ್ರೇಡ್ ಮಾಡಬೇಕಾಗುತ್ತದೆ. ಸುಗಮ ಸಂಪರ್ಕ ಸಾಧನವನ್ನಾಗಿಸಲು ಕಂಪನಿಯು ಉಚಿತವಾಗಿ 4ಜಿ ಸಿಮ್ ಕಾರ್ಡ್ ವಿತರಣೆ ಮಾಡಲಿದೆ.

ನಷ್ಟದ ಹಾದಿಯಲ್ಲಿರುವ ಸಾರ್ವಜನಿಕ ವಲಯದ ಟೆಲಿಕಾಂ ಸಂಸ್ಥೆ ಸರ್ಕಾರದ ಪಾಲಿಗೆ ಬಿಸಿತುಪ್ಪವಾಗಿದೆ.ಮುಂಬರುವ ಹಬ್ಬದ ಋತುವಿನಲ್ಲಿ ನೌಕರರ ಸಂಬಳಮಾರಾಟಗಾರರ ಬಿಲ್ ಪಾವತಿ ಸಮಸ್ಯೆ ಬಗೆಗೆ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ಹಣಕಾಸು ಸಚಿವಾಲಯದ ಮೂಲಗಳು ಮತ್ತು ದೂರಸಂಪರ್ಕ ಇಲಾಖೆ (ಡಿಒಟಿ)  ಹೇಳಿದೆ.

SCROLL FOR NEXT