ವಾಣಿಜ್ಯ

ಆರ್ಥಿಕ ಕುಸಿತ: ಭಾರತ ತನ್ನ ನ್ಯೂನತೆಗಳನ್ನು ಎದುರಿಸಬೇಕಾಗಿದೆ

Nagaraja AB

ನವ ದೆಹಲಿ: ಲಭ್ಯವಿರುವ ಮಾಹಿತಿ ಪ್ರಕಾರ  ಕೊನೆಯ ತ್ರೈಮಾಸಿಕದಲ್ಲಿ ದೇಶದ ಆರ್ಥಿಕತೆಯು ಶೇ.  5% ರಷ್ಟಿದ್ದು, ಪೂರ್ಣ ಆರ್ಥಿಕ ವರ್ಷದ ಬೆಳವಣಿಗೆ ತೀರಾ ಕೆಳಮಟ್ಟದಲ್ಲಿದೆ. ಇತ್ತೀಚೆಗೆ, ಅರ್ಥಶಾಸ್ತ್ರಜ್ಞರ ಗುಪ್ತಚರ ಘಟಕವು 2019-20ರಲ್ಲಿ 5.2% ನಷ್ಟು ಬೆಳವಣಿಗೆಯಾಗಲಿದೆ ಎಂದು ಸೂಚಿಸಿದೆ.

ದೇಶದಲ್ಲಿನ ವ್ಯಾಪಾರ ವಲಯ ಹಾಗೂ ನೀತಿಗಳಲ್ಲಿ ಆರ್ಥಿಕ ಬೆಳವಣಿಗೆ ಕುಂಠಿತ ಸಾಮಾನ್ಯವಾಗಿದೆ. ಬಹಳ ವರ್ಷಗಳ ಹಿಂದೆ ಶೇ.7 ಅಥವಾ 8ರಷ್ಟು ಬೆಳವಣಿಗೆಯನ್ನು ಭಾರತ ತನ್ನ ಜನ್ಮ ಸಿದ್ಧ ಹಕ್ಕಿನ ರೀತಿಯಲ್ಲಿ ಪರಿಗಣಿಸುತಿತ್ತು. ಜಾಗತಿಕ ಬಿಕ್ಕಟ್ಟಿನ ನಡುವೆಯೂ ಜೆಡಿಪಿ ಮಟ್ಟ ಕೆಳಗೆ ಇರಲಿಲ್ಲ. ಅನೇಕ ಸಂದರ್ಭಗಳಲ್ಲಿ ಶೇ. 7ರ ಅಸುಪಾಸಿನಲ್ಲಿಯೇ ಇತ್ತು.

ಈಗ ಏನಾಗುತ್ತಿದೆ? ದೇಶ ಆರ್ಥಿಕತೆಯು ಬಿಕ್ಕಟ್ಟನ್ನು ಎದುರಿಸುತ್ತಿದೆ,  ಆವರ್ತಕ  ಮತ್ತು ರಚನಾತ್ಮಕ ಅಂಶಗಳ ಸಂಯೋಜನೆಯಿಂದಾಗಿ ಚೇತರಿಕೆ ಎಂಬುದು ಕಷ್ಟಕರವಾಗಿ ಪರಿಣಮಿಸಿದೆ. ನರೇಂದ್ರ ಮೋದಿ 2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾದಾಗಿನಿಂದಲೂ ಮನೆಯ ಬಳಕೆ ಕುಸಿದಿದ್ದು, ಅನೇಕ ವರ್ಷಗಳಿಂದ ಏನೂ ನಡೆದಿಲ್ಲ. ಗ್ರಾಮೀಣ ಜನರ ಕೈಯಲ್ಲಿ ಹಣ ಸಿಗಬೇಕು ಅಂತಾ ಪ್ರಾರ್ಥಿಸುತ್ತಲೇ ಸಲಹೆ ನೀಡುತ್ತಿದ್ದಾರೆ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಹೇಳಿದ್ದಾರೆ.

ನೋಟ್ ಅಮಾನ್ಯತೆ , ಜಿಎಸ್ ಟಿ ಹಾಗೂ ಕಳೆದ ವರ್ಷದ ಬ್ಯಾಂಕಿಂಗ್ ಸಾಲ ಕುಸಿತ ಆರ್ಥಿಕ ಬೆಳವಣಿಗೆ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಆದರೆ, ಅದಕ್ಕಿಂತಲೂ ಗಂಭೀರವಾದ ಸಮಸ್ಯೆಯೂ ಇದೆ. ಗ್ರಾಹಕರ ಬೇಡಿಕೆಯನ್ನು ಉತ್ತೇಜಿಸುವುದು ಎಂದಿಗೂ ಸುಸ್ಥಿರ ಬೆಳವಣಿಗೆಯ ಮಾದರಿ ಎಂದು ಪರಿಗಣಿಸಬಾರದು ಬದಲಿಗೆ ಹೆಚ್ಚಿನ ಮಟ್ಟದ ಖಾಸಗಿ ಹೂಡಿಕೆಗೆ ಉತ್ತೇಜನ ನೀಡುವತ್ತ ಭಾರತ ಗಮನ ಹರಿಸಬೇಕಿತ್ತು ಎಂಬಂತಹ ಅಭಿಪ್ರಾಯಗಳು ವ್ಯಕ್ತವಾಗಿವೆ.

SCROLL FOR NEXT