ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಮಹಿಳೆಯರ ಮೊಗದಲ್ಲಿ ಹಿಗ್ಗು ತಂದ ಚಿನ್ನ! ಬಂಗಾರದ ಬೆಲೆಯಲ್ಲಿ ಅಲ್ಪ ಇಳಿಕೆ

ರೂಪಾಯಿ ಪ್ರಾಬಲ್ಯ ಹಾಗೂ ದುರ್ಬಲ ಅಂತರರಾಷ್ಟ್ರೀಯ ವಹಿವಾಟಿನ ಸೂಚನೆ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ ಶುಕ್ರವಾರ 10 ಗ್ರಾಂಗೆ 121 ರೂ ಇಳಿಕೆಯಾಗಿ 38,564 ರೂ.ಗೆ ತಲುಪಿದೆ. ಬೆಳ್ಳಿ ಕೂಡ ಬೆಲೆಯಲ್ಲಿ ಅಲ್ಪ ಇಳಿಕೆ ದಾಖಲಿಸಿದ್ದುಪ್ರತಿ ಕಿಲೋಗ್ರಾಂಗೆ 851 ರೂ ಇಳಿಕೆ ಕಂಡು 46,384 ರೂ. ತಲುಪಿದೆ.

ಸಂಗ್ರಹ ಚಿತ್ರ
Raghavendra Adiga
Updated On : 27 Sept 2019, 8:07 pm

ನವದೆಹಲಿ: ರೂಪಾಯಿ ಪ್ರಾಬಲ್ಯ ಹಾಗೂ  ದುರ್ಬಲ ಅಂತರರಾಷ್ಟ್ರೀಯ ವಹಿವಾಟಿನ ಸೂಚನೆ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ ಶುಕ್ರವಾರ 10 ಗ್ರಾಂಗೆ 121 ರೂ ಇಳಿಕೆಯಾಗಿ  38,564 ರೂ.ಗೆ ತಲುಪಿದೆ. ಬೆಳ್ಳಿ ಕೂಡ ಬೆಲೆಯಲ್ಲಿ ಅಲ್ಪ ಇಳಿಕೆ ದಾಖಲಿಸಿದ್ದುಪ್ರತಿ ಕಿಲೋಗ್ರಾಂಗೆ 851 ರೂ ಇಳಿಕೆ ಕಂಡು 46,384 ರೂ. ತಲುಪಿದೆ. 

24 ಕಾರಟ್ ಚಿನ್ನವು ದೆಹಲಿಯಲ್ಲಿ 10 ಗ್ರಾಂಗೆ 38,685 ರೂ. ಆಗಿದ್ದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಮುಖ್ಯಸ್ಥ (ಸಲಹಾ-ಪಿಸಿಜಿ) ದೇವರ್ಶ್ ವಕಿಲ್  ಅವರೆನ್ನುವಂತೆ ರೂಪಾಯಿ ಮೌಲ್ಯ ಬಲವರ್ಧನೆದುರ್ಬಲ ಅಂತರರಾಷ್ಟ್ರೀಯ  ವಹಿವಾಟಿನ ಸೂಚನೆ  ಚಿನ್ನದ ಬೆಲೆ ಇಳಿಕೆಗೆ ಕಾರಣವಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಚಿನ್ನವು 1,497 ಯುಎಸ್ ಡಾಲರ್ ಗೆ ಕುಸಿದಿದೆ.ನ್ಯೂಯಾರ್ಕ್ ನಲ್ಲಿ ಔನ್ಸ್ ಗೆ 17 ಡಾಲರ್ ಆಗಿದ್ದರೆ ಬೆಳ್ಳಿ ಬೆಲೆ ಔನ್ಸ್ ಗೆ 17.54 ಡಾಲರ್ ಆಗಿದೆ.

Advertisement

Advertisement

ಜಾಗತಿಕ ಮಾರುಕಟ್ಟೆಗಳಲ್ಲಿ ಕಚ್ಚಾ ತೈಲ ಬೆಲೆಗಳು ಶೇಕಡಾ 1 ಕ್ಕಿಂತಲೂ ಹೆಚ್ಚು ಕುಸಿದ ಬಳಿಕ ಮಧ್ಯಾಹ್ನದ ವಹಿವಾಟಿನಲ್ಲಿ ರೂಪಾಯಿ ಬಲವರ್ಧನೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement